ಯುವಪ್ರೇಮಿ - ಮುತ್ತಿನ್ ಪದ್ಯಗಳು

ಪ್ರೇಮಿಗೆ ಇಲ್ಲ ಎಲ್ಲೆ, ಪ್ರೇಮಕ್ಕೆ ಇರದುದು ಪ್ರೇಮಿಗೆ ಏಕೆ ? ಬನ್ನಿ ಪ್ರೇಮಿಗಳೆ, ಪ್ರೇಮಿಸೋಣ....!!

Friday, April 03, 2009

ಅಮ್ಮ ನಾನು, ಪರಮಾತ್ಮನ ಆಣೆ


Align Centerಅಮ್ಮ ನಾನು, ಪರಮಾತ್ಮನ ಆಣೆ, ಬಿಯರ್ ಕುಡ್ದಿಲ್ಲಮ್ಮ
ಎಲ್ಲಾ ಸೇರಿ ನನ್ನ ಬಾಯಿಗೆ, ಕುಡಿಸಿ ಕೆಡಿಸಿದರಮ್ಮಾ.....!!

ನೀನೆ ನೋಡು ಬೀಯರ್ ಬಾಟಲ್, ಕೂಲರ್ ಮೂಲೇಲಿ
ಹೇಗೆತಾನೆ ತೆಗೆಯಲಿ ಅಮ್ಮ, ನನ್ನ ಕೈನಲಿ ಓಪನೆರ್ ಇಲ್ವಲ್ಲಮ್ಮ

ಗೋಪಿ ಹೇಳಿದಾ, ಬೀಯರ್ ಕುಡಿದ ಬಾಯನ್ನು ಒರೆಸುತ್ತ
ಬಾಯಿ ಒರೆಸಿದಾ ಕೈಯಲಿ, ಬೀಯರ್ ಬಾಟಲ್ ಮರೆಸುತ್ತಾ...!

ಎತ್ತಿದ ಪೋನಿನ ರಿಸೀವರನ್ನು, ಮೆತ್ತಗಿಟ್ಟು ನಕ್ಕಳು ಮಮ್ಮಿ
ಅಪ್ಪಂಗೆ ಏನು ಹೇಳೊಲ್ಲಾ ಅಂತಾ..!

ಅಮ್ಮ ನಾನು, ಪರಮಾತ್ಮನ ಆಣೆ, ಬಿಯರ್ ಕುಡ್ದಿಲ್ಲಮ್ಮ
ಎಲ್ಲಾ ಸೇರಿ ನನ್ನ ಬಾಯಿಗೆ, ಕುಡಿಸಿ ಕೆಡಿಸಿದರಮ್ಮಾ.....!!

-ಯುವಪ್ರೇಮಿ

Labels: , , ,

Thursday, August 21, 2008

ಬರೆಯಲೇಗೆ ಪ್ರೇಮ ಪತ್ರ..!!



ಪ್ರೇಯಸಿ ಇರದಿರೆ ಬರೆಯಲೇಗೆ ಪತ್ರ
ಪ್ರೇಮ ಪತ್ರ ಬರೆಯದ ಜೀವನ ಬಲು ವಿಚಿತ್ರ
ನೆನೆದು ನೆನೆದು ನೆನೆದು ಹೋದೆ ಅವಳ ಚಿತ್ರ
ನೆನೆದ ಮನದ ಬಳಿಗೆ ಎಂದು ಬರುವಳೊ ಮಿತ್ರ...!

ಪ್ರೇಯಸಿ ಇರದಿರೆ ಬರೆಯಲೇಗೆ ಪತ್ರ
ಪ್ರೇಮ ಪತ್ರ ಬರೆಯದ ಜೀವನ ಬಲು ವಿಚಿತ್ರ...!!

ಕಂಗಳ್ ಕೊರಗಿ ಕರಗಿದೆ, ಅವಳ ಕಾಣದೆ
ಕಿವಿಯು ಕುಳಿತು ಮರುಗಿದೆ, ಅವಳ ಹೆಸರ ಕೇಳದೆ
ನುಡಿಯೆ ದಣಿದು ಒಣಗಿದೆ, ನಮ್ಮ ಒಲವ ಹಂಚದೆ
ಒಡಲು ಬಾಡಿದ ಹೂವಾಗಿದೆ, ಅವಳ ಒರಗದೆ....!

ಪ್ರೇಯಸಿ ಇರದಿರೆ ಬರೆಯಲೇಗೆ ಪತ್ರ
ಪ್ರೇಮ ಪತ್ರ ಬರೆಯದ ಜೀವನ ಬಲು ವಿಚಿತ್ರ...!!

ಅವಿತೆಯೆಲ್ಲೇ ಕಾಣದಂತೆ ತಿಳಿಸೆ ಕಾರಣ
ನನ್ನ ಪ್ರೇಮ ತಿಳಿಯೆ ನೀ,ಅಲ್ಲ ಸಾದಾರಣ
ನೀನು ಬರದೆ ಅರಿದಿದೆ ತೆಂಗು ತೋರಣ
ನಿನ್ನ ಚುಂಬನ ಚಿಗುರದೆ, ನನ್ನ ಮಾರಣ
ನನ್ನ ಮಾರಣ, ನೀನೆ ಕಾರಣ, ನನ್ನ ಮಾರಣ, ನೀನೆ ಕಾರಣ............!!

-ಯುವಪ್ರೇಮಿ

Friday, June 13, 2008

ನಕ್ಯಾಳ..!!

ನಕ್ಯಾಳ, ಆಕಿ ನನ್ನ ನಗಿಸ್ಯಾಳ
ಹೊಕ್ಯಾಳ,ಆಕಿ ಮನಸ ಹೊಕ್ಯಾಳ

ಮೆಲ್ಲ ಮೆಲ್ಲ ಮಳ್ಳಿ ಹಾಂಗೆ
ನೋಟ ಕದ್ದ ಕಳ್ಳಿ ಹಾಂಗೆ
ಸರ್ರನ ಬಂದು ಸೊರೆ ಮಾಡಿ
ನನ್ನ ಹೇಳದೆ ಕೇಳದೆ ಕರೆದೊಯ್ದಾಳ..!

ಇಟ್ಯಾಳ, ಆಕಿ ಮುತ್ತಾ ನಿಟ್ಯಾಳ
ಘಲ್ಲು ಘಲ್ಲು ಗಲ್ಲ ತಂದು
ನನ್ನ ಮೈಯ ಒತ್ತಿ ಬಂದು

ಏನ್ಮಾಡ್ಯಾಳೋ ತಮ್ಮ...?

ಘಲ್ಲು ಘಲ್ಲು ಗಲ್ಲ ತಂದು
ನನ್ನ ಮೈಯ ಒತ್ತಿ ಬಂದು
ಕೆನ್ನಿ ಕಚ್ಚಿ ಕೆಂಪು ಮಾಡಿ
ನಂಗೆ ಮುತ್ತಾ ಇಟ್ಟು ಮರೆಯಾದಾಳ..!

ಚಲೊ ಆತು ಬುಡು..!!

ತಬ್ಯಾಳ, ಆಕಿ ನನ್ನ ತಬ್ಯಾಳ
ತಂಪು ತಂಪು ತೋಳ ತಂದು
ನನ್ನ ಬಿಡದೆ ತಬ್ಬಿ ನಿಂದು

ಬಾರೀ ಅದಾಳೀಕಿ ಉಸಾರು..!

ತಂಪು ತಂಪು ತೋಳ ತಂದು
ನನ್ನ ಬಿಡದೆ ತಬ್ಬಿ ನಿಂದು
ನೀನ ನಂಗೆ ತಕ್ಕ ಜೋಡಿ
ನಿನ್ ಕೊಡಿ ಬಾಳ್ವಿ ಮಾಡೀನಂದ್ಯಾಳ..!

ನಕ್ಯಾಳ, ಆಕಿ ನನ್ನ ನಗಿಸ್ಯಾಳ
ಹೊಕ್ಯಾಳ,ಆಕಿ ಮನಸ ಹೊಕ್ಯಾಳ

-ಯುವಪ್ರೇಮಿ

Thursday, June 12, 2008

ರೇಖ..!!


ಲಾಲ ಲಲ ಲಾಲ ಲಲ ಲಾಲ ಲಾಲಲ
ಲಾಲಲಾಲ ಲಾಲ ಲಲ ಲಾಲ ಲಾಲಲ

ಹೇಳಿ ಕೊಡೆ ಹೇಳಿ ಕೊಡೆ ಚಿತ್ರ ಬಿಡಿಸಲು
ಹೇಳಲೇನೊ
ಹೊರಟ ಮನಸು ನಾಚಿ ನಿಲ್ಲಲು

ನಿನ್ನ ಕಣ್ಣ ರೆಪ್ಪೆ ಇಂದ
ಗೀಚಿದೆಲ್ಲ
ಗೆರೆಯು ಅಂದ
ಗೆರೆಯು
ಹಾರೊ ಜಿಂಕೆಯಾಗಿದೆ
ಜಿಂಕೆ ಹಾರಿ ಮೋಡ ಸೇರಿದೆ

ಹೇಳಿ ಕೊಡೆ ಹೇಳಿ ಕೊಡೆ ಚಿತ್ರ ಬಿಡಿಸಲು
ಹೇಳಲೇನೊ
ಹೊರಟ ಮನಸು ನಾಚಿ ನಿಲ್ಲಲು

ಮೆಲ್ಲ ನಡಿಯೆ ಮುಳ್ಳು ದಾರಿ
ಬಾಯಿ
ಬಿಟ್ರೆ ನೀ ಬಜಾರಿ
ಅಂತ
ನಾ ಹೇಳಲು

ಕಣ್ಣಿನಿಂದ ಮುತ್ತು ಉದುರಿ
ನಿನ್ನ
ಕೆನ್ನೆ ಕಚ್ಚಿ ಹಾರಿ
ಪರಾರಿ
ಆಗಲು

ಹೇಳಿ ಕೊಡೆ ಹೇಳಿ ಕೊಡೆ ಚಿತ್ರ ಬಿಡಿಸಲು
ಹೇಳಲೇನೊ
ಹೊರಟ ಮನಸು ನಾಚಿ ನಿಲ್ಲಲು

ನಾನು : ನಂಗೆ ಚಿತ್ರ ಬಿಡಿಸೊದು ಹೇಳ್ಕೊಡೆಮ್ಮಾ
ನೀನು
: ನೀನು ಅಲ್ಲಿ, ನಾನು ಇಲ್ಲಿ ಅದು ಹೇಗೆ ಹೇಳ್ಕೊಡ್ಲಿ ?

ನೀನು ಅಲ್ಲಿ, ನಾನು ಇಲ್ಲಿ
ನಮ್ಮ
ನಡುವೆ ಮೈಲಿ ಮೈಲಿ
ಅಂತ
ನೀ ನುಲಿಯಲು

ನನ್ನ ಮನಸು ನಿನ್ನ ಸುತ್ತ
ಬಿಡದೆ
ನಿನ್ನ ಪೀಡಿಸುತ್ತ
ಸುಸ್ತು
ಹೊಡೆಯಲು

ಹೇಳಿ ಕೊಡೆ ಹೇಳಿ ಕೊಡೆ ಚಿತ್ರ ಬಿಡಿಸಲು
ಹೇಳಲೇನೊ
ಹೊರಟ ಮನಸು ನಾಚಿ ನಿಲ್ಲಲು

ನೀನು ಕಲಿಸದೆ, ಮನಸು ಉಳಿಯದೆ
ಉಳಿಸೆ
ನನ್ನ ಮನಸ ಕಲಿಸಿ ಚಿತ್ರ ಬಿಡಿಸಲು

ಉಳಿಸೆ ಮನಸ, ನನ್ನ ಕಲಿಸಿ
ಕಲಿಸೆ
ನನ್ನ, ಮನಸ ಉಳಿಸಿ
ನನ್ನ
ಉಳಿಸೆ, ಮನಸ ಕಲಿಸಿ
ನಿನ್ನ
ಚಿತ್ರ ಬಿಡಿಸಲು

ಚಿತ್ರ ಬಿಡಿಸೊದು ಹೇಳ್ಕೊಡ್ತಿಯ ಅಲ್ವ ?

ಲಾಲ ಲಲ ಲಾಲ ಲಲ ಲಾಲ ಲಾಲಲ
ಲಾಲಲಾಲ
ಲಾಲ ಲಲ ಲಾಲ ಲಾಲಲ

-ಯುವಪ್ರೇಮಿ

Friday, April 25, 2008

ನಲ್ಲೆ..!!


ನಲ್ಲೆ ನಲ್ಲೆ ನಲ್ಲೆ..!!

ನಿನ್ನ ಓರೇ ನೋಟ
ನನ್ನ ಮೇಲೆ ಏಕೆ ನಲ್ಲೆ
ಕದ್ದು ನನ್ನ ನೀ ನೋಡುವಾಟ
ಎಲ್ಲವ ನಾನು ಬಲ್ಲೆ

ನಲ್ಲೆ ನಲ್ಲೆ ನಲ್ಲೆ..!!

ಎದುರು ಮನೆಯೊಳೆ ಇದ್ದು
ಎದುರೆದುರು ಬಂದಾಗ ನಾವು
ನೀನು ನನ್ನ ಕಣ್ಣೆತ್ತು ನೋಡದೆ
ನಡೆದಾಗ ಬಂತೆನೆಗೆ ನೋವು..!

ನಲ್ಲೆ ನಲ್ಲೆ ನಲ್ಲೆ..!!

ಕೋಮಲವೊ ನಿನ್ನ ಕಣ್ಣು
ಮನಸೊರೆ ಮಾಡಿಹುದೆ ಎನ್ನ
ಬಿಂಕದಿ ನಡೆದು ನೀ ಬರುತಿರಲು
ಬಣ್ಣ ಬಣ್ಣದ ಕನಸು ಕಾಡಿಹುದೆ ನನ್ನ..!

ನಲ್ಲೆ ನಲ್ಲೆ ನಲ್ಲೆ..!!

ನಡುಮನೆಯೊಳು ನೀ ಕೊತು
ಅಳ್ಳುಮನೆ ಆಡೊ ನೋಟ
ಮುಂಗುರುಳ ಮಡಿಚಿ ಸನ್ನೆ ಮಾಡಿ
ಎನ್ನ ಬಳಿ ಬಾ ಎಂದಾಟ ರಸದೊಟ ..!!

ನಲ್ಲೆ ನಲ್ಲೆ ನಲ್ಲೆ..!!

ಸಕ್ಕರೆ ಕೇಳುವ ನೆಪದಿ
ತಟ್ಟೆ ನೀ ಮನೆ ಬಾಗಿಲನ್ನ
ಸಕ್ಕರೆಗು ಸಿಹಿಯು ನಿನ್ನ ನಗೆಯು
ಅದರ ಅಕ್ಕರೆ ಕಾಡಿಹುದೆ ಮನಸನ್ನ..!!

ನಲ್ಲೆ ನಲ್ಲೆ ನಲ್ಲೆ..!!

ತಿಂಗಳುಗಳ ಹರೆಯ ನಮ್ಮ ಆಟಕ್ಕೆ
ಬರುವೆಯ ನೀನು ನಮ್ಮ ತೋಟಕ್ಕೆ
ಮನಬಿಚ್ಚಿ ನಾವಲ್ಲಿ ಮಾತಾಡುವ
ಒಲವ ನಮ್ಮೊಳು ಹಂಚಿ ಒಂದಾಗುವ..!

ನಲ್ಲೆ ನಲ್ಲೆ ನಲ್ಲೆ..!!

-ಯುವಪ್ರೇಮಿ

Friday, April 18, 2008

ಅಶ್ರು ಧಾರೆ..!!


ಹೃದಯ ಮಿಡಿತವೆ ಅಳದಿರು,ಒಡಲ ಸಿಡಿತವೆ ಅಳದಿರು
ನಯನ ಧಾರೆಯೆ ಅಳದಿರು,ಮನದ ಮೌನವೆ ಅಳದಿರು
ಗೆಳತಿ ನನ್ನ ತೊರೆಯಲು, ನೀವು ಬಳಲಿ ಅಳದಿರಿ
ನೀವು ಬಳಲಿ ಅಳದಿರಿ..!!

ಪ್ರೇಮ ಪತ್ರವೆ ಅಳದಿರು,ಪ್ರಣಯ ಕವಿತೆಯೆ ಅಳದಿರು
ಭಾವ ಜೀವವೆ ಅಳದಿರು,ವಿರಹ ರಾಗವೆ ಅಳದಿರು
ಅವಳು ನನ್ನ ಮರೆಯಲು, ನೀವು ಮರುಗಿ ಅಳದಿರಿ
ನೀವು ಮರುಗಿ ಅಳದಿರಿ..!!

ವನದ ಹಸಿರೆ ಅಳದಿರು,ಸುಳಿವ ಗಾಳಿಯೆ ಅಳದಿರು
ಬಾನ ಮೇಘವೆ ಅಳದಿರು,ಹಾಡು ಹಕ್ಕಿಯೆ ಅಳದಿರು
ಅವಳು ಪರನ ವರಿಸಿಲು,ನೀವು ಶಪಿಸಿ ಅಳದಿರಿ
ನೀವು ಶಪಿಸಿ ಅಳದಿರಿ..!!

ಗುಡಿಯ ರಂಗನೆ ಅಳದಿರು,ಕೊಳಲ ಊದದೆ ಅಳದಿರು
ಉರಿವ ಧೊಪವೆ ಅಳದಿರು,ಬೆಳಗೊ ದೀಪವೆ ಅಳದಿರು
ಎನ್ನ ಬಾಳು ಬಿರಿಯಲು,ನೀವು ಕೊರಗಿ ಅಳದಿರಿ
ನೀವು ಕೊರಗಿ ಅಳದಿರಿ..!!

-ಯುವಪ್ರೇಮಿ

Tuesday, April 15, 2008

ಎಲ್ಲಿರುವೆ ನೀ ಗೆಳೆತಿ...!!


ಎಲ್ಲಿರುವೆ ನೀನು ಗೆಳತಿಯೆ
ನನ್ನ ನೆನೆವುದ ಮರೆತೆಯೆ
ನಿನ್ನೊಳು ನನ್ನನು ಅರಿತೆಯ
ನನ್ನ ಸೇರೆ ನೀ ಬರುವೆಯ..!!

ನಿನ್ನ ಹುಡುಕದ ಊರು ಇಲ್ಲ
ನಿನ್ನನು ನೆನೆಯದ ಕ್ಷಣಗಳೆ ಇಲ್ಲ
ನಿದಿರೆಯ ತುಂಬ ನಿನ್ನದೆ ಭ್ರಾಂತು
ನರಳಿದೆ ಮನಸು ನಿನ್ನಲಿ ಸೋತು
ಸೇರು ಬಾರೆ ಎಲ್ಲಿರುವೆ ನೀ ಗೆಳತಿ...!

ನಿನ್ನ ನೋಡುವ ಕಾತುರ ಉಕ್ಕಿ
ಹಾಡಿದೆ ಒಲವಿನ ಪ್ರಣಯದ ಹಕ್ಕಿ
ಎಣಿಸಲು ನಿನ್ನಯ ಮಾತಿನ ಮುತ್ತ
ಹುಡುಕಿಹೆ ನಿನ್ನನು ಅತ್ತಾ ಇತ್ತ
ಬಾರೆ ಸೇರು ಎಲ್ಲಿರುವೆ ನೀ ಗೆಳತಿ..!

ಹುಡುಕಿದ ಮುಖಗಳು ನಿನ್ನವಲ್ಲ
ಮಾತುಗಳವು ನಿನ್ನ ಹೋಲುವುದಿಲ್ಲ
ನಿನ್ನಯ ಹೆಜ್ಜೆಯ ದನಿ ಇದು ಅಲ್ಲ
ಒಲವಿನ ಗಂಧವ ನಾ ಕಾಣಲೆ ಇಲ್ಲ
ಬಾರೆ ಸೇರು ಎಲ್ಲಿರುವೆ ನೀ ಗೆಳತಿ..!

ಗೀಚಿದ ಸಾಲವು ಕವಿತೆಗಳಲ್ಲ
ವಿರಹದ ಹಾಡನು ಕೇಳುವರಿಲ್ಲ
ನಿನ್ನ ಕಲ್ಪನೆಯೊಂದೆ ಎನಗಿಹ ಶಕ್ತಿ
ಜೀವಕೆ ಸಂಜೀವಿನಿ, ಜೀವಕೆ ಸಂಜೀವಿನಿ
ಬಾರೆ ಬಾರೆ ಎಲ್ಲಿರುವೆ ನೀ ಗೆಳತಿ..!

ನಿನ್ನನು ನೋಡುವ ಹಸಿವು ಕಾಣೆ
ಒಲವೊಳು ಹೊರಳುವ ಕನಸು ಕಾಣೆ
ಸೇರಲು ನಿನ್ನನು ಬರುವೆನು ನಾನು
ಕಂಡೊಡೆ ನನ್ನನು ಚುಂಬಿಸೆ ನೀನು
ಬಾರೆ ಬಾರೆ ಎಲ್ಲಿರುವೆ ನೀ ಗೆಳತಿ..!

ಎಲ್ಲಿರುವೆ ನೀನು ಗೆಳತಿಯೆ
ನನ್ನ ನೆನೆವುದ ಮರೆತೆಯೆ
ನಿನ್ನೊಳು ನನ್ನನು ಅರಿತೆಯ
ನನ್ನ ಸೇರೆ ನೀ ಬರುವೆಯ..!!

-ಯುವಪ್ರೇಮಿ

Monday, April 07, 2008

ಆ ಮೊಗದೊಳು..!!


ಆ ಮೊಗದೊಳು ಸುಂದರ ಚಲುವನು ನಾ ನೋಡಿದೆ
ಮನವ ಮರೆಸೊ ಚಲುವು ಅದುವೆ ದಿನವೊ ಕಾಡಿದೆ..!!

ಮುಂಗುರುಳ ಮುದ್ದಾಟ ಹೆಚ್ಚಿದೆ ತಂಗಾಳಿಗೆ
ಮುತ್ತನಿಡುವ ಆ ನೋಟ ಕಣ್ಣಿಗೆ ಸಿಹಿ ಹೋಳಿಗೆ
ನಿನ್ನ ನಗುವೆ ಸವಿಯ ರಾಗ ನನ್ನ ಬಾಳಿಗೆ
ಕೊಂಚ ಉಳಿಸಿ ಇಡುವೆಯ ನೀ ನಮ್ಮ ನಾಳೆಗೆ

ಆ ಮೊಗದೊಳು ಸುಂದರ ಚಲುವನು ನಾ ನೋಡಿದೆ
ಮನವ ಮರೆಸೊ ಚಲುವು ಅದುವೆ ದಿನವೊ ಕಾಡಿದೆ..!!

ಆ ನಯನ ನವಿಲಾಗಿ ಕುಣಿದಿಹುದೆ ಕೆನ್ನೆ ಮೇಲೆ
ಕುಣಿವ ನಿನ್ನ ನಲಿವಿಗೆ ಕಾರಣ ನಾ ಕೇಳಲೆ
ನೀ ನುಡಿವ ಸವಿ ಮಾತು ಕೊಗಿಲೆ ಹಾಡಾಗಲೆ
ಹಕ್ಕಿಯ ಸಾಲು ಹಾಡಿಗೆ ಕೊಡಿ ಬಾನಲಿ ಹಾರಾಡಲೆ

ಆ ಮೊಗದೊಳು ಸುಂದರ ಚಲುವನು ನಾ ನೋಡಿದೆ
ಮನವ ಮರೆಸೊ ಚಲುವು ಅದುವೆ ದಿನವೊ ಕಾಡಿದೆ..!!

ಕೆಂಪು ತುಟಿಗಳ ತಂಪಿನಲ್ಲಿ ಈ ಹೃದಯ ಮಲಗಿದೆ
ಕನಸು ನೊರು ಹೊತ್ತ ತೇರು ದಿನವೊ ಹರಿದಿದೆ
ಸವಿಯೆ ನಿನ್ನ ಮೊಗದ ಸೊಬಗ ಒಲವು ಕಾದಾಡಿದೆ
ನೀನು ಚೆಲ್ಲಿ ಹೋದ ಮತ್ತಲಿ ಮನವಿದು ನಲಿದಿದೆ

ಆ ಮೊಗದೊಳು ಸುಂದರ ಚಲುವನು ನಾ ನೋಡಿದೆ
ಮನವ ಮರೆಸೊ ಚಲುವು ಅದುವೆ ದಿನವೊ ಕಾಡಿದೆ..!!

-ಯುವಪ್ರೇಮಿ

Sunday, March 30, 2008

ಕೆನ್ನೆ ಕಚ್ಚಿದ ಮಾಮ..!!


ಕೆನ್ನೆ ಕಚ್ಚಿದ ಕಾಣೆ ಅಮ್ಮ
ಕೆನ್ನೆ ಕಚ್ಚಿದ ಮಾಮ
ಮೆತ್ತಗೆ ನನ್ನೆಡೆ ಸನ್ನೆಯ ಮಾಡಿ
ಮಾತಿಗೆ ಕರೆದು ಮುತ್ತನು ಇಟ್ಟ


ನಿನ್ನ ತುಟಿಗಳೊ ಕಲ್ಲಿನ ಸಕ್ಕರೆ
ನನ ಬಾಯಿಗೆ ಬಹಳ ಅಕ್ಕರೆ
ಅಂತ ಹೇಳಿ ಮಾಮ
ಸೊಂಟ ಚಿವುಟಿ ಹಾರೇಬಿಟ್ಟ


ಜಾತ್ರೆ ಇಂದ ಜುಮಕಿ ತರ್ತೀನಿ
ಮುತ್ತಿನ ಸರ ಮಾಡಿಸಿ ಕೊಡ್ತೀನಿ
ಅಮ್ಮಂಗೆ ಏನು ಹೇಳಬೇಡ
ಅಂತ ಹೇಳ್ದಾ ಕಾಣೆ


ಲಂಗ ದಾವಣಿ ನಿಂಗೆ ಚಂದ ಕಾಣೆ
ಕಾಪಿ ತಗೊಂಡು ಬಾ ನನ್ನ ಕೊಣೆಗೆ
ಕೊಬ್ಬರಿ ಮಿಟಾಯಿ ನಿಂಗೆ ಇಷ್ಟ ಅಲ್ವ
ಅಳ್ ಮನೆ ಆಡ್ತ ಹಂಚ್ಕೊಂಡ್ ತಿನ್ನುವ
ಅಂತ ಹೇಳ್ದಾ ಮಾಮ


ಸಂಜೆ ಮತ್ತೆ ಬರ್ತೀನಿ ಅಂದ
ಸೌದೆ ಇಂದ ಸೊಂಟ ಮುರಿಯೆ
ಕಾಯಿಸೆ ಅಮ್ಮ ಮಗುಚೊ ಕೈಯಿ
ನಂಗೆ ಮುತ್ತಿಡ್ವಾಗ ನಿನ್ನ ಕೊಗ್ತೀನಿ
ಮಾಮನ ಮೊತಿಗೆ ಮೊರು ಬರೆ ಹಾಕೆ


ಕೆನ್ನೆ ಕಚ್ಚಿದ ಕಾಣೆ ಅಮ್ಮ
ಕೆನ್ನೆ ಕಚ್ಚಿದ ಮಾಮ
ಮೆತ್ತಗೆ ಮರೆಯಲಿ ಕರೆದು ನನ್ನ
ಮುತ್ತಿನ ಮೇಲೆ ಮುತ್ತನು ಇಟ್ಟ..!!


-ಯುವಪ್ರೇಮಿ

Wednesday, March 26, 2008

ಬಾರೆ ನಲ್ಲೆ ನೋಡಲು..!!


ಬಂದೆ ಏಕೆ ನನ್ನ ಬಾಳಲಿ
ಭಾವದ ಜೊತೆ ಬೆರೆಯಲು
ನಿಂದೆ ಏಕೆ ನನ್ನ ಮನದಲಿ
ಪ್ರೀತಿಯ ಅಮೃತ ಉಣಿಸಲು

ನಿನ್ನಯ ಗೆಳೆತನ ಎಸ್ಟು ಚೆನ್ನ
ಮೀರಿಹುದು ಹೊನ್ನ ಹೊಳಪನು
ನಿನ್ನ ಒಲವಲಿ ಮನವು ನನ್ನ
ನಗೆಯ ಮಳೆಯಲಿ ಕುಣಿಸಿದೆ

ಮುತ್ತನಿತ್ತ ನಿನ್ನಯ ಮೊಗವಿದು
ಎಂತಹ ಸೌಮ್ಯದ ರೂಪವು
ನಿನ್ನ ಮತ್ತಲ್ಲೆ ತೇಲಿ ನಲಿದೆನು
ನೀನೆ ನನ್ನೊಲವಿನ ದೀಪವು

ನಿನ್ನ ಕಂಡು ಉರುಳಿದೆ ವರುಷ
ಯಾತನೆ ಮನದ ಪ್ರತಿ ನಿಮಿಷ
ನೀನು ಇಲ್ಲದೆ ಎಲ್ಲಿದೆ ಹರುಷ
ಏಕೆ ನನ್ನನು ಕೊಲ್ಲದು ಈ ವಿಷ
ಬಾರೆ ನನ್ನನು ಕಾಣಲು...!!

ಮುತ್ತ ಕೊಟ್ಟು ಮರತಿಹೆ ನೀನು
ಹಕ್ಕಿಯೇ ಇಲ್ಲದೆ ಬಂಜರು ಬಾನು
ನಿನ್ನನೆ ನೆನಸುತ ಎಣಿಸಿಹೆ ಉಸಿರನು
ನೋಡಲು ಬಾರೆಯ ನನ್ನನು ನೀನು
ಬಾರೆಯ ನನ್ನನು ಕಾಣಲು..!!

ನಿನ್ನನು ಕಾಣದ ಕಣ್ಣಿದೇಕೆ
ನಿನ್ನ ಹೆಸರನು ಕೊಗದ ನಾಲಿಗೆ ಏಕೆ
ನಿನ್ನ ಒಲವಲಿ ಅರಳದ ಬದುಕಿದು ಏಕೆ
ನಿನ್ನಯ ಹೆಸರಲೆ ಆರಲಿ ಉಸಿರು
ಬಾರಲೆ ನನ್ನನು ನೋಡಲು..!!
ಬಾರಲೆ ನನ್ನನು ನೋಡಲು..!!

-ಯುವಪ್ರೇಮಿ

Saturday, March 22, 2008

ಆರಾಧನೆ..!!


ಎಂತ ಚಲುವೆ ಗೆಳತಿ ನೀನು
ನಿನ್ನ ಚಲುವಿಗೆ ಸೋತೆ ನಾನು
ನಿನ್ನ ಒಲವೆ ಸವಿಯ ಜೇನು
ಜೇನ ಬಯಸಿ ಬಂದೆ ನಾನು..!

ಸ್ಪೊರ್ತಿ ನೀನು ಗೆಳತಿಯೆ
ಈ ನಿಸರ್ಗದ ಯೌವನಕೆ
ನಿನ್ನ ಕಣ್ಣೆ ನೀಲಿ ಬಾನು
ಹಾರ ಬಯಸಿ ಬಂದೆ ನಾನು..!

ದನಿಯು ನೀನು ಗೆಳತಿಯೆ
ಹಾಡುತಿರುವ ಕೋಗಿಲೆಗೆ
ನಿನ್ನ ನುಡಿಯೆ ಹೊಳೆವ ಮುತ್ತು
ಮುತ್ತ ಎಣಿಸೆ ಬಂದೆ ನಾನು..!

ನಡೆಯು ನೀನು ಗೆಳತಿಯೆ
ನಲಿದಾಡುವ ಝರಿಗಳಿಗೆ
ನಿನ್ನ ಗೆಜ್ಜೆ ನಾದ ಕೇಳಿ
ಸೇರ ಬಂದೆ ನಿನ್ನ ನಾನು..!

-ಯುವಪ್ರೇಮಿ

Wednesday, March 19, 2008

ಮುಕ್ತ : ಒಂದು ಪ್ರೇಮ ಪ್ರಸಂಗ..!!


ಎದುರು ಮನೆಗೆ ಹೊಸ ಹುಡುಗಿ ಬಂದಾಗ ಕಣ್ಣ ಉರಿಗೆ ಮುಕ್ತಿ
ಬಂದ ದಿನವೆ ನನ ಕಂಡು ನಕ್ಕಾಗ ಹೃದಯಕ್ಕೆ ಬಂತು ಶಕ್ತಿ |
ಮನದ ತುಂಬ ಅವಳ ನೋಟ ನನ್ನ ಕನಸಿಗೀಗ ಶಕ್ತಿ
ಮತ್ತೆಂದು ಕಂಡೇನೊ ಅವಳ ಇತ್ತ ಸುತ್ತ ಮುತ್ತ ||


ಮೊಗಲೆಲ್ಲ ಅವಳು ಮುಡಿದ ಮಲ್ಲಿಗೆಯ ಸುಗಂಧ ಕಂಪು ಕಂಪು
ನಾ ಕಂಡಿಲ್ಲ ಇಂತ ತಂಪು |
ಮೊಗಲೆಲ್ಲ ಅವಳು ಮುಡಿದ ಮಲ್ಲಿಗೆಯ ಸುಗಂಧ ಕಂಪು ಕಂಪು
ನಾ ಕಂಡಿಲ್ಲ ಇಂತ ತಂಪು ||


ನೋಟದಲ್ಲೆ ಮನ ಕಲಕಿ ಹೊರಟಿಹಳು ಈ ಹೃದಯದತ್ತ ಈಗ
ಇದು ತಾನೆ ನನ್ನ ಯೋಗ |
ಕಣ್ಣಿನಲ್ಲೆ ಹಸಿ ಮುತ್ತನಿತ್ತು ಮಾಡಿಹಳು ನನ್ನ ಸುಸ್ತು
ಇ ಅನುಭವವೆ ನನಗೆ ಹೊಸತು ||


ಬರೆವೆನೀಗ ಅಣೆ ಬೆವರ ಒರೆಸಿ ನಾ ಅವಳ್ಗೆ ಪ್ರೇಮ ಪತ್ರ
ಕೊಡುವೆನದನ ಬಂದಾಗ ಹತ್ರ |
ಬರೆವೆನೀಗ ತಡಮಾಡದಂತೆ ಅವಳಿಗೊಂದು ಪ್ರೇಮ ಪತ್ರ
ಅವಳೆಂದು ಕೊಡುವಳೊ ಉತ್ರ ||


ಎದುರು ಮನೆಗೆ ಹೊಸ ಹುಡುಗಿ ಬಂದಾಗ ಕಣ್ಣ ಉರಿಗೆ ಮುಕ್ತಿ
ಬಂದ ದಿನವೆ ನನ ಕಂಡು ನಕ್ಕಾಗ ಹೃದಯಕ್ಕೆ ಬಂತು ಶಕ್ತಿ |
ಮನದ ತುಂಬ ಅವಳ ನೋಟ ನನ್ನ ಕನಸಿಗೀಗ ಶಕ್ತಿ
ಮತ್ತೆಂದು ಕಂಡೇನೊ ಅವಳ ಇತ್ತ ಸುತ್ತ ಮುತ್ತ ||

-ಯುವಪ್ರೇಮಿ

Friday, September 07, 2007

ಮುತ್ತಿಗಾಗಿ...!!



ಮುತ್ತ ಕೊಡೇ ಕೋಮಲಾಂಗಿ
ಏನ್ನ ಮ್ಯಾಲೆ ಈ ಮುನಿಸ್ಯಾಕೆ
ನಿನ ಕಾಡುವ ನಗುವೆ ಸವಿ
ಆ ಮುನಿಸಿನ ಮೌನ ಬಿಸಾಕೆ

ಮುತ್ತಲಿರುವ ಮತ್ತು ಮಧುರ
ಮಧುರ ಮನದ ಚಿಂತೆ ದೊರ
ದೊರ ನೀ ನಿರಲು ಬಂತು ವಿರಹ
ವಿರಹ ಸರಿಸೆ ನೀ ಕೊಟ್ಟು ಮುತ್ತ..!!

ಮುತ್ತ ಕೊಡೇ ಕೋಮಲಾಂಗಿ
ಏನ್ನ ಮ್ಯಾಲೆ ಆ ಮುನಿಸ್ಯಾಕೆ

ನಿನ ಮುತ್ತ ನೆನೆಸಿ ಜೀವ
ಜೀವ ಮರೆತು ಇಹದ ಭಾವ
ಭಾವ ಅರಸಿ ಬಂದು ನಿನ್ನ
ನನ್ನ ನಿನ್ನಲಿ ಬೆರೆಸಿದೆ..!!

ಓಮ್ಮೆ ಮುತ್ತ ನಿಟು ನೋಡೆ
ನಾ ಮತ್ಯಾರನು ಅರಸೆನು

ಅಂದು ನೀನು ಇಟ್ಟ ಮುತ್ತು
ಇಂದು ಮತ್ತೊಂದ ಬೆಡಿಹುದು
ಇಂದು ನೀನಿಡುವ ಮುತ್ತೆ
ನಾಳಿನ ಸಿಹಿಬಾಳ್ವೆಗೆ ನಾಂದಿಯು..!!

ಅಲ್ಲೆ ನಿಂತು ನೀ ನುಲಿಯಬ್ಯಾಡ
ಇಲ್ಲಿ ಬಂದೊಂದು ಮುತ್ತ ಕೊಡೆ..!!

-ಯುವಪ್ರೇಮಿ

Thursday, July 26, 2007

ನಾನೆ ತಾನೆ..!!

ನಿನ್ನ ಕೆನ್ನೆ ನಕ್ಕಾಗ ನನ್ನ ನೆನೆ ಗೆಳತಿ
ನಿನ್ನ ಕೆನ್ನೆ ಹೊಳೆದಾಗ ನನ್ನ ನೆನೆ
ಅರಳಿ ನಿಂತ ಆ ಕೆನ್ನೆಗಳ ಚಿವುಟಿ
ಮರೆಯಾದವನು ನಾನೆ ತಾನೆ..!!

ನಿನ್ನ ತುಟಿಯ ತಳಮಳವ ಬಲ್ಲೆ
ಅದರ ವಿರಹ ವೇದನೆಯ ಬಲ್ಲೆನು
ವಿರಹದ ನೆರಳೊಳು ನರಳಿದ ನಿನ್ನಲಿ
ಸ್ವರ್ಗದ ಸ್ಪರ್ಶವ ತಂದವನು ನಾನೆ..!!

ಕಣ್ಣೊಳು ಕಾಣದ ಕಾತರ ಕಂಡು
ದಣಿವಲೊ ದಾಹವ ಮರೆಯುತ ನಿಂದು
ಕೊರಗಲಿ ಮರುಗುತ ಕರಗಿದ ನಿನ್ನಲಿ
ದಿವ್ಯ ರೊಪವ ದರ್ಶಿಸಿದವನು ನಾನೆ..!!

ಗಲ್ಲವ ಹಿಡಿದವನ ಗುಂಗಿನಲ್ಲಿ
ಒಡಲನು ಬಳಸಿದ ಗಿಡುಗನೆಲ್ಲೆಂದು
ಮೋಡದ ಮಾಲೆಯ ಹಿಡಿದು ನಿಲ್ಲಲು
ಕಾರಣ ಪುರುಷನು ನಾನೆ ತಾನೆ..!!

ನಡುವಲಿ ಬೆವತಿಹ ನೊರು ಭಾವ
ಭಾವದ ಅಂಗಳದಿ ಅರಳಿದ ನೋವೆ
ಎಳೆ ಎಳೆಯೊಳು ನಂದಿಸಿ ಬಿಡಿಸಿದ
ಜೀವದ ಗೆಳೆಯನು ನಾನೆ ತಾನೆ..!!

ಕಾಲಿಗೆ ಮುತಿನ ಗೆಜ್ಜೆಯ ಕಟ್ಟಿ
ಕುಣಿತವ ಕಾಣಲು ಯಾರಿಲ್ಲವೆನ್ನುವ
ಅಳಲನು ಮುತ್ತಿದ ಮನವನು ಅರಸಿ
ಒಡಲಿನ ನವಿಲನು ನಲಿಸಿದವ ನಾನೆ ತಾನೆ..!!

-ಯುವಪ್ರೇಮಿ

Monday, July 16, 2007

ಮನ್ಮಥ ದುಂಭಿ ನಾ..!!

ಚಂದಿರನ ತೋಟದಿ ಅರಳಿಹ ಹೊವಂತೆ
ನಿನ್ನ ಹಾಲ್ಗೆನ್ನೆಯ ಕೋಮಲತೆ ಸೆಳೆದೈತೆ
ನಕ್ಷತ್ರದ ತುದಿ ತಡವಿರದೆ ಹೊಳೆದಂತೆ
ನಿನ ಕಣ್ಣ ನೋಟ ಮನದೆಲ್ಲೆ ಮೀಟೈತೆ..!

ಬಿಡಿ ಬಿಡಿಯ ನಲಿವ ಕೇಶ ಸ್ಪರ್ಶ
ಬಿಡದಂತೆ ಸುರಿಸಿಹಿದು ಹೃದಯದಿ ಹರ್ಷ
ಅಲ್ಲಿ ಇಲ್ಲಿ ಮತ್ತೆಲ್ಲೋ ಹಾರಿ ಹರಿದು
ಮೈಸುಗಂಧ ಜೇನೊಣಗಳ ಸೆಳೆದು
ಸವಿ ಸುದೆಯ ಸವೆಯ ಸಿಕ್ಕ ನೀ
ನಾ ಕಂಡ ಅಪ್ರತಿಮ ಸುಂದರಿಯು..!

ಮೋಡಗಳ ಮಾಲೆಯಾಯ್ತು ಮುತ್ತಿನ ಹಾರ
ತೋಯ್ವ್ ತುಟಿಯ ನೆನದ ಮತ್ತಿನ ಭಾರ
ನೀ ಒರಗಿ ಸರಿದ ಒಡಲ ಮೌನ ಮಾತು
ತಿರು ತಿರುಗಿ ನಡುಗಿಹುದೆ ಈ ಮನವು ಸೋತು..!!

ಅಮೃತದಿ ಗಂಧದ ಮೈಯ ತೀಡಿ
ಪನ್ನೀರ ಗುಲಾಬಿಯೊಳು ಹೊರಳಾಡಿ
ಮಲ್ಲಿಗೆಯ ತೊಟ್ಟಿನಂತೆ ಬಿಂಕದ ನಡು
ಸಹಿಸೆ ಬಿರುಕ ಬಿಟ್ಟಿಹುದು ಕಂಡು,
ಬೇಲೊರೊಳ ಪ್ರತಿಮೆಯು..!!

ಹರಳೊಳರಳಿದ ಬೆರಳುಗಳವು
ಮುಟ್ಟೆಲ್ಲ ಮೈಯ ಮೆರೆಸಿಹವು
ಸ್ಪರ್ಶದಲೆ ತುಂತುರು ಹನಿ ಸುರಿಸಿ
ಲೋಕವ ಬ್ರಮೆಯೊಳ್ ಮರೆಸಿ..!!

ಗೆಜ್ಜೆ ಹಿಡಿದ ಕಾಲೆಜ್ಜೆ ನೋಟ
ಘಲ್ ಘಲೆಂಬ ನಿನ ನಡಿಗೆಯ ಆಟ
ಹೃದಯವೆಂಬ ರಂಗೋಲೆ ಸುತ್ತಿ
ಹೆಜ್ಜೆ ಹೆಜ್ಜೆ ಹಾಡಿಹುದೆ ಹೊಸತು ಸ್ತುತಿ
ಮನದಿ ಮೊಡಿಸೆ ಮಧುರ ಗಾನ...!!

ಅರಳಿಹ ಹೊವೊಳು ಹರಿವ ಸವಿಜೇನು ನೀ
ನಿನ್ನ ಸವಿಯೆ ಬಂದ ಮನ್ಮಥ ದುಂಬಿ ನಾ..!!

-ಯುವಪ್ರೇಮಿ

Friday, July 06, 2007

ಗುರಿ..!!


ಗುರಿಯೆ ಕಾಣದ ದಾರಿಯಲ್ಲಿ
ಅಲೆಯುತಿರುವೆ ಗುರಿಯ ಹುಡುಕುತ

ಹುಡುಕೊ ತವಕದ ನೊರಾಸೆ ಕರಗಿ
ತರುವೆ ನೆರೆಯಿತೊ, ಮೌನ ಸಂಮತ...ಅ..ಅ

ಗುರಿಯೆ ಕಾಣದ ದಾರಿಯಲ್ಲಿ
ಅಲೆಯುತಿರುವೆ ಗುರಿಯ ಹುಡುಕುತ...!

ಕೊಲ್ಲೊ ಕ್ಷಣಗಳ ಕಾದಾಟ ತಾಳೆ
ಕೊರಳ ಮಿಸುಕುವ ಆರ್ಭಟವ ತಾಳೆ..!
ಕುರುಡು ಮುಸುಕಿದ ನೋಟ ತಾಳೆ...ಎ.ಎ.ಎ.

ತಾಳೆ... ತಾಳೆ... ತಾಳೆ... ತಾಳೆ...!!

ಕುರುಡು ಮುಸುಕಿದ ಈ ನೋಟ ತಾಳೆ...
ಎಡುವಿ ನಡೆಯುವ ಈ ಪಯಣ ತಾಳೆನೋ..!!

ಗುರಿಯೆ ಕಾಣದ ದಾರಿಯಲ್ಲಿ
ಅಲೆಯುತಿರುವೆ ಗುರಿಯ ಹುಡುಕುತ

ಹುಡುಕೊ ತವಕದ ಜಿಜ್ನಾಸೆ ಕರಗಿ
ಕ್ಷಣದಿ ಮೆರೆಸಿತೊ, ಈ ಬಾಳ ಪಥವ....ಅ.ಅ.

ಸೂತ್ರ ಹರಿದ ಪಟದಂತೀ ಜೀವ
ಇದ್ದರು ಇರದಿಹ ಈ ಹೃದಯ ಭಾವ
ಸಹಿಸಲಾಗದೊ ಮನದ ನೋವ...ಅ.ಅ..ಅ.ಅ.

ನೋವಾ.. ನೋವಾ... ನೋವಾ.. ನೋವಾ..!!

ಸಹಿಸಲಾಗದೊ ಈ ಮನದ ನೋವ
ಉರುಳಿಹುದು ಯುಗವು, ಕಂಡು ನಲಿವಾ..!!

ಗುರಿಯೆ ಕಾಣದ ದಾರಿಯಲ್ಲಿ
ಅಲೆಯುತಿರುವೆ ಗುರಿಯ ಹುಡುಕುತ

ಹುಡುಕೊ ತವಕದ ನೊರಾಸೆ ಕರಗಿ
ತರುವೆ ನೆರೆಯಿತೊ, ಮೌನ ಸಂಮತ....ಅ..ಅ..ಅ

ಕೊನೆಯ ಮುಟ್ಟಲು ಇಲ್ಲ ಶಕುತಿ
ಪಯಣ ಪಯಣಿಸೆ ನಾ ಕಾಣೆ ಯುಕ್ತಿ
ಕೊನೆಯೆ ಕಾಣದೀ ಪಯಣಕೆಂದೊ ಮುಕ್ತಿ...ಇ..ಇ..ಇ

ಮುಕ್ತೀ... ಮುಕ್ತೀ... ಮುಕ್ತೀ... ಮುಕ್ತೀ...!!

ಕೊನೆಯೆ ಕಾಣದ ಪಯಣಕೆಂದೊ ಮುಕ್ತಿ
ಮನದಿ ಬತ್ತಿ ಬರಿದಾಗಿದೆ ಸ್ಪೊರ್ತಿ...!!

ಗುರಿಯೆ ಕಾಣದ ದಾರಿಯಲ್ಲಿ
ಅಲೆಯುತಿರುವೆ ಗುರಿಯ ಹುಡುಕುತ

ಹುಡುಕೊ ತವಕದ ಜಂಜಾಟ ಕರಗಿ
ಜರಿದಿಹುದೀ ಜೀವ ಜೀವವ ತ್ಯಜಿಸುತಾ...!!
ಜರಿದಿಹುದೀ ಜೀವ ತ್ಯಜಿಸುತಾ..ಅ..ಅ..ಅ.ಅ!!

-ಯುವಪ್ರೆಮಿ

Saturday, June 16, 2007

ಶಾಪ..!!


ನಿನ್ನ ಚಂದಕೆ ಇಲ್ಲ ಮಾತು
ಆಡುತಿರುವೆ ಇದ ನಾ ಸೋತು
ಕನಸ ಕಣೊ ಪರಿಯ ರೊಪ
ನನ್ನ ಮನಕೆ ಅದುವೆ ಕೊಪಾ.. ಅ..ಅ..ಅ

ಬೆಟ್ಟ ಸುತ್ತಿ, ಗಿರಿಯ ಬಳಸಿ
ಬಂದೆ ನಾ ಸೇರಲೊ.......!
ಸೆರಲೊಲ್ಲ ಮನಸು ನಿನದು
ಮರೆತೆಯ ನನ ಸರಿಯುತಾ...

ಭೊಮಿ ಭಾನು ಒಂದೆ ಎನಿಸಿ
ನಿನ್ನ ನಾ ಬಯಸಿದೆ...
ಬಯಸಲೊಲ್ಲ ಬವಣೆ ನಿನದು
ಬಂದೆ ಎಕೆ ನನ್ನ ಬದುಕಲೀ...ಇ..ಇಇ.

ಹಗಲು ಅರಸಿ, ಇರುಳು ನೆನೆಸಿ
ನಿನ ಹೃದಯ ನಾ ಮುಟ್ಟಲು...
ಬಿಸಿಲಿನಲ್ಲಿ ಬಿರುಗಾಳಿ ನೀನು
ಏಕೆ ಪ್ರಾಣ ಕಸಿದು ಹೋದೇ..ಎ..ಎ..ಎ.

ಅಂದವೆಲ್ಲ ಈ ಅಂಗಾಂಗಕಲ್ಲ
ಇಂದು ಎನಗೆ ಶಪಿಸಿತು...!
ಮನಸಿನ ಆ ಕುರೊಪವೆನೇ
ನಾ ನೋಡದೆ ನಡೆದೆ ಎಕೇ...ಎ..ಎ..ಎ.

ಜೀವ ಭಾರ, ಹೃದಯದಗುರ
ಇಂದು ನಾ ತ್ಯಜಿಸುವೆ...!
ನಿನ್ನ ಪ್ರೀತಿಗೆ ಈ ಪ್ರೀತಿಯುಡುಗೊರೆ
ನಿನ ಮಡಿಲಲಿಡುವೆ ಸಾಕೇ...ಎ..ಎ..ಎ.

ನಿನ್ನ ಚಂದಕೆ ಇಲ್ಲವೆ ಮಾತು
ಆಡುತಿರುವೆ ಇದ ನಾ ಸೋತು
ಕನಸ ಕಣೊ ಪರಿಯ ರೊಪ
ಅರಿಯೆ ಬರಿಸಿದೆನೆ ಶಾಪಾ..ಅ.ಅ..ಅ..

-ಯುವಪ್ರೇಮಿ

ನನ್ನ-ನಿನ್ನ ನಡುವೆ..!!


ನನ್ನ ನಿನ್ನ ನಡುವಿನಲಿ..!
ಪ್ರೀತಿ ಬಳ್ಳಿ ನಲಿದಿಹುದು,!
ವರುಷಗಳೆ ಉರುಳಿದರೊ
ಹರುಷವದು ದಿನೆ ಬೆಳೆದಿಹುದು..!

ನೀ ಮುಡಿದ ಹೊವದು..!
ಕೊಗಿ ನನ್ನ ಕರೆದಿಹುದು
ಓರೆ ನೋಟದ ಆ ನಯನ
ನನ್ನಲ್ಲೇನೊ ಗೊಣಗಿಹುದು..!

ನನ್ನ ನಿನ್ನ ನಡುವಿನಲಿ..!
ಪ್ರೀತಿ ಉಕ್ಕಿ ಹರಿದಿಯುದು
ಯುಗಗಳೆ ಉರುಳಿ ಒರಳಿದರೊ
ಹರುಷವು ಚಿಮ್ಮಿ ಬೆಳೆದಿಹುದು..!

ನಿನ್ನ ನುಡಿಯೊ ಬಲುಚಂದ..!
ಸವಿದಂತೆಲ್ಲ ಸವಿ ಸಿರಿಗಂಧ.!
ಮಾತು ಮಾತೆ ಮತ್ತೆ ಮೊಡಿಹುದು
ನಿನ್ನ ಕೊಡಿದ ಆ ಕ್ಷಣದಿಂದ..!

ನಿನ್ನ ನಗು ಎಂತ ಮಾಯೆಯೊ
ಆ ಮಾಟದಾಟ ನನ್ನ ಕಾಡಿಹುದು
ಹಾಗೆ ನಕ್ಕು ನೀ ತಿರುಗಿದೊಡೆ
ಲೊಕವನ್ನೆ ಮರೆ ಮಾಚಿಹುದು

ನನ್ನ ನಿನ್ನ ನಡುವಿನಲಿ..!
ಪ್ರೀತಿ ಬಂಧ ಬಾಡದಂತಹದು
ಇತಿಹಾಸವೆ ಅಳಿಸಿ ಹೋದರೊ
ಈ ಪ್ರೀತಿಯಂದು ಶಾಶ್ವತವೊ..!

ನಿನ್ನ ಆ ನುಲಿವ ನಡೆ..!
ನನ್ನ ಸದಾ ಕುಣಿಸಿಹುದು
ನಿನ್ನ ಗೆಜ್ಜೆಯ ದನಿಯದೊ
ಹೆಜ್ಜೆ ಹೆಜ್ಜೆಗು ಎನ್ನ ತಣಿಸಿಹುದೊ..!

ನನ್ನ ನಿನ್ನ ಮನವದೊ...!
ಸರಿಸಲಾಗದಂತೆ ಬೆರೆತಿಹುದು
ಬೆರೆತು ನುಡಿವ ಪ್ರೇಮ ಮಾತದೊ
ಜೀವ ಭಾವದ ಪ್ರಣಯದಾಟವೊ..!

-ಯುವಪ್ರೇಮಿ

Friday, June 08, 2007

ಹೃದಯ ಗೀತೆ..!!


ನೀ ಅಲ್ಲೆ ನಿಂತು ಹಾಡೆ ಒಮ್ಮೆ
ನಾ ಇಲ್ಲೆ ಕೇಳಿ ನಲಿಯುವೆ..!
ನೀ ಹಾಡೊ ರಾಗ ಕೇಳದಿರೇನ್..!
ನಿನ ಭಾವ ಈ ಹೃದಯ ಮುಟ್ಟದೆ..!!

ಸಾಗರ ನಮ್ಮಿಬ್ಬರ ಸರಿಸಿದರೇನ್
ಭುವಿಯ ಮೇಲೆ ಇರುವೆವು ನಾವು..!
ನಿನ ನೆನೆಪೆ ನಿತ್ಯ ದೈವ ಧೊಪ
ನಾ ದಿನವು ನೆನೆದು ಹಚ್ಚಿಹೆ...!

ಪ್ರೀತಿ ನೀನು, ಕ್ರಾಂತಿ ನೀನು
ಈ ಬದುಕ ರೊಪಗಾರ್ತಿ ನೀನು
ಶಕ್ತಿ ನೀನು, ಯುಕ್ತಿ ನೀನು
ಈ ದೇಹಕೆ ಉಸಿರಾದೆ ನೀನು

ನೀ ಹಾಡಲು ಪದ ಸಿಗದಿರ್ದೊಡೆ
ನಮ್ಮ ಪ್ರೇಮ ಮಾತನೊಮ್ಮೆ ನೆನೆ..!
ನಿನ ಬಡಿವ ಕಣ್ಣ ರೆಪ್ಪೆಯೆ ರಾಗ
ನಾ ನೀಡಿದ ಚುಂಬನವದುವೆ ತಾಳ..!

ಅಲ್ಲೆ ನಿಂತು ಹಾಡೆ ಒಮ್ಮೆ
ನಾ ಇಲ್ಲೆ ಸವಿದು ತಣಿವೆನು

-ಯುವಪ್ರೇಮಿ

Sunday, May 20, 2007

ನಿನ್ನಯ ನೆನಪು..!!

** ಓಂದು ವಿರಹದ ವಿಹಂಗಮನ, ವಿರಹಿಗಳಿಗೆಮಾತ್ರವಲ್ಲ, ಪ್ರೇಮಿಗಳಿಗೊ ಕೊಡ..!!

ನಿನ ನೆನಪೆ ಮೊಡಿ ಬಂದು..!
ಮನಸನೆ ಮೋಡಿ ಮಾಡಿತೋ..
ಮನವ ಕಾಡುವ ಮೌನಾ ನೀನು
ಆ ಮೌನರಾಗ ನನ್ನ ಸೆಳೆಯಿತೋ..!

ಎತ್ತ ನೋಡು ನಿನ್ನದೆ ರೂಪ
ಬಿದಡೆ ಕಾಡುವಂತಾ ಶಾಪ..!
ನಿನ್ನ ನೆನಪಿನಲ್ಲೆ ಕಳೆದು ಹೋದೆನೆ..!
ಓ ನಿನ್ನ ನೆನಪೇ..!!

ಕಳೆದುಹೋದ ಪ್ರೀತಿ ನೀನು..!
ಇಂದು ಜಗವ ಹುಡುಕುತಲಿಹೆನು
ನನ್ನ ಕಣ್ಣಮುಂದೆ ಒಮ್ಮೆ ಬಾರೆಯಾ..!

ಮರಳಿ ನನ್ನ ಸೇರಲು ಬಾರೆ..!
ಬೆಂದ ಹೃದಯದಿ ಸ್ಪೊರ್ತಿ ತಾರೆ..!
ನನ್ನ ಪ್ರೀತಿ ದೀಪ ಬೆಳಗು ಬಾ ಪ್ರಿಯೆ..!
ಓ ನನ್ನ ಪ್ರಿಯೆ..!!

ಪ್ರಾಣ ಪಕ್ಷಿ ಹಾರುವುದೀಗಾ..!
ನೀನು ನನ್ನ ಸೇರದಾಗ..!
ಈ ಪ್ರಾಣ ಹಾರೋ ಮುನ್ನ ಕಾಣೆಲೆ..!

ಕಾಂತಿ ಕಳೆದ ಸೊರ್ಯನಂತೆ..!
ನಗುವ ಮರೆತ ಹೊವಿನಂತೆ..!
ನಿನ್ನ ಪ್ರೀತಿ ಸಿಗದ ಈ ಬಾಳು ಸಾದ್ಯವೆ..!
ಓ ನನ್ನ ಪ್ರಿಯೇ...!

ನಿನ್ನ ನೆನಪು ಮೊಡಿ ಬಂದು
ಮನಸಿನ ನಾಡಿ ಮಿಡಿಯಿತೋ..!
ಮನಸ ಕಾಡುವ ಮೌನ ನೀನು
ಆ ಮೌನರಾಗ ನನ್ನ ಸೆಳೆಯಿತು..

-ಯುವಪ್ರೇಮಿ

Friday, May 18, 2007

ಕನಸಿನೊರ ಪಯಣದಲ್ಲಿ ..!!

ಕನಸಿನೊರ ಪಯಣದಲ್ಲಿ ಪಯಣಿಗನು ನಾನು
ಕೈಯೊಳಾಸೆ ಮೊಟೆ ಹೊತ್ತಿ ಪಯಣಿಸುತಿಹೆನು..!
ಕನಸಿನೊರ ದಾರಿ ಕಾಣಲು ಬೆಟ್ಟಗುಡ್ಡವ ಸುತ್ತಿ..!
ಕಂಡ ಕನಸ ಕೈಯಲಿಡಿಯುವ ಹೆಬ್ಬಯಕೆಯನೊತ್ತಿ.!!

ಕನಸಿನೊರೆ ನನ್ನ ಕನಸು,ನಾ ಮನಪೊರ ಕಾಣ್ವೆನು..!!

ಕನಸುಗಾರ ನಾನು, ಕನಸಕಾಣ್ವುದೆ ನನ್ನ ಕಾರ್ಯ
ಕನಸಿಲ್ಲದ ಅರೆಕ್ಷಣವು ಏನ್ನಲಿಲ್ಲ,ಅದುವೆ ಆಸ್ಚರ್ಯ
ಕನಸಿನಲ್ಲಿ ಏನ್ನಮನವು ಸಧಾ ಮಗ್ನವಾಗಿಹುದು...!
ಮಗ್ನತೆಯ ಮಾದುರ್ಯದಿ ಇಹವನೆ ಮರೆತಿಹುದು..!

ಕನಸಿನೊರೆ ನನ್ನ ಮನಸು,ನಾ ಇದರೊಡನೆ ಹಾಡ್ವೆನು..!!

ಕನಸಿನೊಲುಮೆ ಏನ್ನಮೇಲೆ ಇಹುದು ಸಪ್ತಕಡಲಿನಸ್ಟು
ಕಂಡದೆಲ್ಲ ನನಸಮಾಡಿ ಹೊಸಗನಸ ಸಿಹಿ ಸವಿಯಬಿಟ್ಟು
ಕನಸಕಾಣ್ವ ಆ ಸಮಯವೆ ಮಕರಂದದ ಸಿಹಿಯಂತೆ..!
ಕನಸು ಮಿಡಿವ ಮದುರ ಮಾತೆ ಜೇಂಕಾರದ ಸುದೆಯಂತೆ..!

ಕನಸಿನೊರೆ ನನ್ನ ಒಡತಿ,ನಾ ಇವಳೊಡನೆ ಬಾಳ್ವೆನು..!!

ಕನಸಿನೊರ ನಾಸೇರ್ವೆನು ಬೇದಿಸೆಲ್ಲ ಆತಂಕದಡೆತಡೆ
ಕನಸ ಕಾಣ್ವ ಗಳಯರನೆಲ್ಲ ಕೊಡಿಸುವೆನು ಏನ್ನೊಡೆ
ಕಣ ಕಣದ ಏನ್ನುಸಿರಿದು ರಚಿಸಿದೆ ಕನಸಿನೊರಿನೆಸರ..!
ಕಂಡೆಲ್ಲ ಕನಸ ನನಸಾಗಿಸಿ ತ್ಯಜಿಸೆ ಸಿದ್ಧ ಈ ಉಸಿರ..!!

ಕನಸಿನೊರ ಪಯಣದಲ್ಲಿ ಪಯಣಿಗನು ನಾನು..!
ಕನಸಿನಲ್ಲು ಕನಸಿನೊರ ಕ್ಷಣದಿ ಸವಿಯ ಬಯಸಿಹೆನು..!!

-ಯುವಪ್ರೇಮಿ

Monday, May 14, 2007

ಬೆಂಗ್ಳೊರ್ ಹುಡ್ಗ ನಾನು..!!


ಸುಂದ್ರಿ ನೀನು ಕೋಮಲಾಂಗಿ..!
ನಿನ್ ಹೃದಯ ಕದ್ದ ಪೋರ ನಾನೆ.!

ರೆಕ್ಕೆ ಕಟ್ಟಿ ಹಾರ್ಕೊಂಡ್ ಬಾರೆ..!
ಮೋಡ ಹಿಡಿದು ಜಾರ್ಕೊಂಡ್ ಬಾರೆ..!
ಒಂದಾಗೋಣ ಊರಾಚೇಲಿ...!!
ಕಣ್ಣಾಮುಚ್ಚಾಲೆ ಆಟಾವಾಡ್ತ..!

ಸುಂದ್ರಿ ನೀನು ಕೋಮಲಾಂಗಿ..!
ಪ್ರೇಮಲೋಕದ್ ಕಿನ್ನರ ನಾನು..!

ನನ್ನೆಗಲ ಏರೆ ಚಲ್ವಿ ನೀನು...!
ಊರ್ನೆನಿಂಗೆ ಹೊನ್ನಾರ ಹಾಕ್ತೀನಿ
ನೀನೆ ತೇರು ನನ್ಬಾಳ್ನಾಗೆ ಕೇಳೆ..!
ನೀ ನಗ್ತಿದ್ರದೆ ನನ್ಜೀವನ್ದಾಗೆ ಕಳೆ..!

ಬೆಡಗಿ ನೀನು ಈ ಬೊಮಂಡ್ಳದಾಗೆ..!!
ಬೆಣ್ಣೆಗಿನ್ತ ಚಂದಾಗೈತೆ ನಿನ್ನ ನಗೆ..!

ಊರುಸಾಬ್ರಿ ನಿಂಗ್ಯಾಕೆ ನನ್ರಾಣಿ..!!
ಒಟ್ಟಿಗೆಕೊತು ಆಡೋಣ ಹಳ್ಳ್ಮಾಣೆ
ಹಾಲ್ನಾಗೆ ಉರುಳಿ ಹಾಡಾಡೋಣ..!
ಒಬ್ರಲೊಬ್ರಾಗಿ ಬಾಳ್ವೆಮಾಡೋಣ....!!

ಕಳಸ ನೀನು ನನ್ಕನಸಿನ್ ಪಲ್ಲಿಕೀಗೆ..!
ನಿನ್ನುಡಿಯೆ ಆಗೈತೆ ಹಾಡು ಹಕ್ಕೀಗೆ..!

ನಿನ್ಮ್ಯಾಲ್ ಕೊಳಗ್ದಸ್ಟು ಪ್ರೀತಿಐತೆ...!
ನಮ್ಮೊರ್ ಗುಡ್ಡೇನು ಚಿಕ್ದಾಗೋಯ್ತೆ...!
ನಿನ್ಕೆನ್ನೆ ಕಂಡು ನಾಚಾವೆ ಕೆಂದಾವ್ರೆ..!!
ನುಲಿಯೊ ಮೈಕಂಡು ಮುದುಡಾವೆ ಮಲ್ಗೆ..!

ಸುಂದ್ರಿ ನೀನೆ ನನ್ ಕೋಮಲಾಂಗಿ...!!
ನಿನ್ ಹೃದಯ ಕದ್ ಬೆಂಗ್ಳೊರ್ ಹುಡ್ಗ ನಾನೆ...!!!

-ಯುವಪ್ರೇಮಿ

Thursday, May 10, 2007

ಬಣ್ಣಿಸಲೇಗೆ ಚಲುವೆ..!!

ಬಣ್ಣಿಸಲೇಗೆ ಚಲುವೆ, ಜಗದ ಚಲುವೆ ನೀನಾಗಿರುವೆ

ಮಲ್ಲಿಗೆಯ ಕಂಪಿನೊಳು ನಿನ ಅಂದವೆ ಬೆರೆತಿಹುದು
ಸಂಪಿಗೆಯ ಸವಿ ಸುದೆಯದು ನಿನ ನಗೆಗೆ ಸೋತಿಹುದು
ತಾವರೆಯು ಮುದುಡಿಹುದು ನಿನ ಸ್ಪರ್ಶಕೆ ಮಣಿದು
ಕೋಗಿಲೆಯು ಸೊರಗಿಹುದು ನಿನ ಗಾನವ ನೆನೆದು...!

ಬಣ್ಣಿಸಲೇಗೆ ಚಲುವೆ, ನಿನ ಚಲುವಿಗೆ ನಾ ಸೋತಿರುವೆ

ಮುಂಜಾನೆಯ ಮಂಜಂತೆ ಮೋಹಕವು ಮೈನೋಟ
ಮಂಜಲ್ಲಿ ಮೈಮರೆತು ನಡುಗಿಹುದು ಒಡನಾಟ
ಮಾದುರ್ಯದ ಅಮಲಂತೆ ನಿನ್ನ ಕಣ್ಣಾಟ..!
ಅಮಲಲ್ಲಿ ಅಲೆದಾಡುತ ಮನಕಂಟಿಹುದು ಪೇಚಾಟ.!

ಬಣ್ಣಿಸಲೇಗೆ ಚಲುವೆ,ಈ ಉಸಿರಿಗೆ ಜೀವ ನೀತುಂಬಿರುವೆ

ಆಗಸದ ಬಿಳಿ ಮೋಡವು ಬಾಗಿಹುದು ನಿನ ಮುಟ್ಟಲು
ಮಳೆಬಿಲ್ಲಿನ ಹೊಂಬಣ್ಣದಿ ಅನುಕ್ಷಣವು ನಲಿದಾಡಲು
ಧುಂಭಿಯ ದಂಡದು ಹುಡುಕಾಡಿದೆ ನಿನ ಪಡೆಯಲು
ಚಿತ್ತಾರದ ಹನಿಜೇನನು ನಿನ್ನೂಡಲೊಳು ತಾ ಸವಿಯಲು..!

ಬಣ್ಣಿಸಲೇಗೆ ಚಲುವೆ, ಮನದ ನೋಟಕೆ ನೀ ಕಣ್ಣಾಗಿರುವೆ

-ಯುವಪ್ರೆಮಿ

Thursday, May 03, 2007

ಇಂಟರ್ನೆಟ್ಟಿನ ನನ್ನ ಚಲುವೆ...!!


ಆರುಕುಟ್ಟಿನಲ್ಲಿ ನನ್ನ ಚಲುವೆಯ ಕಂಡೆ...!
ಮನಸ ಕದ್ದ ಚೋರಿಯ ಕಂಡೆ..!
ಬ್ಯುಟಿಫುಲ್ಲು ಸ್ಕ್ರಾಪಿನಲ್ಲಿ ಮಿಲನವ ತಂದೆ..
ಪ್ರತಿಕ್ಷಣ ನಾ ನೋಡುತ ನಿಂದೆ..!!

This poem has been hidden purposefully as i have selled the complete rights
to some one for a huge money..!! Dont ask me how much..!! i can just say it
takes 2 months to count the money.. ;-)

-ಯುವಪ್ರೇಮಿ

Thursday, March 15, 2007

ನಿನ್ನ ನಗೆಯ ನೆನೆಪಿನಲ್ಲಿ...!!




ನೆನೆ ನೆನೆದು ನಡುಗಿತು ಮನವು
ನಿನ್ನ ನೆನಪಿನ ಅಂಗಳದಲ್ಲಿ..!!

ಪ್ರೇಮದ ಭಾಷ್ಪವ ಬ್ರಮಿಸುತ ಇಂದು
ಬಾಳ ದಾರಿಯೊಳು ಅನುಕ್ಷಣವು ನೊಂದು
ನಕ್ಕ ಆ ಕ್ಷಣಗಳು ಕಣ್ಣೆದುರು ಬಂದು
ತಂಪನೆರೆದಿದೆ ತನುವಿಗೆ..!! ತನ್ನ ತಾನೆ ಮರೆಸುತ...!!

ನೆನೆ ನೆನೆದು ನಡುಗಿತು ಮನವು
ನಿನ್ನೀ ನೆನಪಿನ ಅಂಗಳದಲ್ಲಿ..!!

ಮದುರ ಮಾತದು ನಕ್ಕಿ ಮೆಲ್ಲನೆ
ನೋಟದ ಆಟವು ನಾಟಿ ಜುಮ್ಮೆನೆ
ಮೊಗದ ನಗೆಯು ಬೀಸಿ ತಣ್ಣನೆ
ಮರೆಸುತಿದೆ ಇಹವನು..!! ನನ್ನ ನಿನ್ನೊಳು ಬೆರೆಸುತ...!!

ನೆನೆ ನೆನೆದು ನಡುಗಿತು ಮನವು
ನಿನ್ನ ನೆನಪಿನ ಭವ್ಯಂಗಳದಲ್ಲಿ..!!

ನಿದಿರೆಯ ನಡುವಲು ನಿನ್ನಯ ನೋಟ
ಹೃದಯದ ಆಳುವನು ಮರೆಸುವ ಮಾಟ
ಅನುಕ್ಷಣ ನಿನ್ನನು ಸೇರುವ ಹುಡುಕಾಟ
ಆವರಿಸಿದೆ ಈ ಎನ್ನನು..!! ನಿನ್ನೀ ನಗೆಯ ನೆನೆಸುತ..!!

ನೆನೆ ನೆನೆದು ಸೊರಗಿದೆ ತನುವು
ನಿನ್ನಯ ನೆನೆಪುಗಳ ಕುಂಚದಲ್ಲಿ...!!

-ಯುವಪ್ರೇಮಿ

Monday, December 11, 2006

ಅಗಲಿಕೆಯ ಹಾದಿಯಲ್ಲಿ...!!

ಮರೆತು ಮರೆಯಾಗಲು ಮೋಡದ ಹನಿಯಲ್ಲ..
ಕ್ಷಣವತ್ತು ಕಣ್ಣೊರಸಲು ಬೀಸಿದ ಬಿರುಗಾಳಿಯಲ್ಲ.
ಬೇಸಿಗೆಯ ಭಾನಿನೊಳು ಬಣ್ಣ ಬಣ್ಣದ ಕನಸುಗಳಿವು..
ಎಂದೋ ನುಡಿದ ಮಾತುಗಳು ಇಂದೆನ್ನ ಕಾಡುತಿಹವು...!!

ನನ್ನ ಮರೆತು ನೀನಿರಬಹುದು..
ನಿನ್ನ ಮರೆತು ನಾ ಬಾಳೆನು....!!

ನಾವು ನಡೆದ ನಡಿಗೆಯು ಎಮ್ಮ ನೋಡಿ ನಡುಗುತಿಹುದು..
ನಾವು ಸುತ್ತಿದ ಮರ ಗಿಡಗಳು ಸೊಸಿಹುದು ಕಂಭನಿಯ..!!
ನಾವು ಸವಿದ ಮಲ್ಲಿಗೆಯ ಕಂಪು ಬೆದರಿ ಬಾಡಿಹುದಿಂದು..
ನುಡಿದಸ್ಟು ಸುಲಭವಲ್ಲ ನಿನ್ನ ಮರೆತು ಮರೆಯಾಗಲು..!!

ನನ್ನನಗಲಿ ನೀ ಜೀವಿಸಬಹುದು...
ನಿನ್ನ ಮರೆತು ನಾ ಉಸಿರಾಡೆನು....!!

ನಮ್ಮ ಪ್ರೇಮ ಗಾನವದುವೆ ಕೋಗಿಲೆಗೂ ಮೀರಿಸಿತ್ತು..!!
ಮನದ ಒಲುಮೆಯ ಕುಣಿತವದುವೆ ನವಿಲನು ನಾಚಿಸಿತ್ತು..
ನಮ್ಮ ಪಿಸುಮಾತುಗಳವು ತಂದಿತ್ತು ಗುಡುಗಿಗು ಗಾಬರಿಯ..!!
ಇಂದೇಕೆ ಮರೆಯಲಿ ನಿನ್ನ, ಎನ್ನ ಕಣ್ತೆರೆಸಿದ ಪ್ರೀತಿಯನ್ನ..!!

ಅಂದು ಇಂದು ಎಂದೂ ಇರುವೆ ನೀನು..
ಎನ್ನೀ ಹೃದಯದ ಅರಮನೆಯಲಿ..!!

ಕನಸಿನಲ್ಲೊ ಸೊಗಸಕಾಣೊ ಅಪ್ರತಮ ಪ್ರೀತಿ ನೀನು..!!
ನಿನ್ನ ನೊಂದ ಮನವನಿನ್ನು ನಾನೆಂದೂ ನೋಯಿಸೆನು..
ಮನದ ಬಡಿತ ಮರೆಯಾದೀತು, ನಿನ್ನ ಮರೆತ ಮರುಕ್ಷಣವೆ..!!
ಹಾರಿ ತುಂಬ ಬಯಸುವೆ ನಿನ್ನ, ಸೇರಿ ಮಾಡಲು ಬಾಳುವೆ..!!

ಮರೆಯದಿರೆನ್ನ ನಿನ್ನ ಕನಸಿನಲ್ಲೂ...
ನಿನ್ನನಗಲಿ ನಾ ನಲಿಯಲಾರೆ...!!

-ಯುವಪ್ರೇಮಿ

Saturday, December 02, 2006

ಹದಡಿದ ಹೃದಯದಂಗಳ...!!

ನನ್ನ ಹೃದಯದಂಗಳದ ತೋಟದಲ್ಲಿ..
ಮನದಾಳದ ಮೌನದ ಬಳ್ಳಿಯಲ್ಲಿ
ನನ್ನ ಪ್ರಾಣವದುವೆ ನರಳುತಿಹುದು
ಮಾಗಿದ ಮೋಹದ ಕುಲುಮೆಯೊಳಿಳಿದು
ಕ್ಷಣ ಕ್ಷಣವು,ಕಳೆಯದ ಯುಗಗಳಂತೆ..!!

ಭವಣೆ ಬಿಡದೆ ಬಿಗಿದಿಹುದೇಕೆ
ನನ್ನ ನಿನ್ನಂತರಂಗವನ್ನು...!!

ಜೇನ ತೆಜಿಸಿದೆ ದುಂಭಿ ದಂಡು
ಜಗದ ದುಗುಡ ಎನ್ನೊಳು ಕಂಡು
ಬಿರುಗಾಳಿಗೇಕೊ ಬರಬಡಿದಿಹುದೀಗ
ಹಾಡಿದೆ ಬಾನಲಿ ಹೊಸದು ರಾಗ
ಭೋಗ,ಯೋಗ,ಸೈಯೋಗ ತೆಜಿಸಿ..!!

ಪ್ರೇಮ ಪ್ರತಿಮೆ ಪಾಳಾಗಿಹುದೇಕೆ
ನನ್ನ ನಿನ್ನ ಹೃದಯವ ಸೀಳಿ...!!

ಜಲದಿ ಜರಿದಿದೆ ಜೀವ ಜನನಿ
ನೆಲದಿ ಮರೆತಿದೆ ಉಸಿರ ಸಿಂಚನ
ಹಳಸಿ ಮಾಸಿ ಮರೆತ ಚಂದನ
ತನು ಮನಗಳಿಗೆ ಆತ್ಮದ ಬಂದನ
ಬದುಕಲೇಕೋ ಬಿಡದ ಆಕ್ರಂದನ..!!

ಪ್ರಣಯದ ಪಕ್ಷಿಎಲ್ಲಿ ಪಯಣಿಸಿಹುದು
ನನ್ನ ನಿನ್ನ ಶ್ವೇತ ಪಂಜರವ ತ್ಯಜಿಸಿ..!!

ಎನಿತು ಮಾಯಾ ಮೆರೆತದ ತೊಳೆಲಾಟ
ಜಿಗ್ನಾಸೆ ಜಂಜಾಟದ ದಿನದ ಸೆಳೆದಾಟ
ಕಾಣದ್ದನ್ನು ಕಂಡುಕೊಳುವ ಹುಡುಕಾಟ
ಹುಸಿಬದುಕೊಳೇಕೀ ತಡಕುವ ಹುಚ್ಚಾಟ
ನಮ್ಮ ತನವ ತಾತ್ಸಾರದಿಂ ಮರೆತು...!!

ಹೃದಯದರಮನೆ ಹರಿದ ಹೊಳು..
ನನ್ನ ನಿನ್ನ ಹೃದಯವದು ಬೆರೆಯದೆ..!!

-ಯುವಪ್ರೇಮಿ

Monday, November 27, 2006

ಪ್ರೇಮೋದ್ಗಾರ...!!


ಬಂದವಳು ನೀನೆ, ಹೃದಯದ ಬಾಗಿಲ ಬಳಿಯಲಿ
ನಿಂದವಳು ನೀನೆ, ಎನ್ನ ಮನದ ಮಂಟಪದಲಿ
ಕರೆದವಳು ನೀನೆ, ನಿನ್ನ ಸನಿಹದೊಳು ಎನ್ನ
ಮೀಟಿದವಳು ನೀನೆ, ಎನ್ನ ತನುವಿನ ತಂತಿಯನ್ನ

ಬಾಡಿಯೋಯಿತೇಕೆ ನಮ್ಮ ಪ್ರೀತಿಯ ಬಳ್ಳಿ..
ಭಾವ ಭಿಂದುವಿನ ನಡುವೆ ನರಳುತ..

ಆಗಸದ ಅಂಚಿನೊಳು ಮಿಂಚಿಹುದು ಆ ಮೊಗವು
ನಕ್ಷತ್ರವ ನಾಚುವಂತೆ ಮಾಡಿಹುದು ಆ ನಗುವು
ಕುಣಿಯುವ ನವಿಲಿಗು ಕೊರಗು ಕಾಡಿಹುದು
ನಿನ ನಡೆಯ ಸವಿಯನೊಮ್ಮೆ ಸಹಿಸಲಾಗದೆ...!

ಹಾರಿಯೋಯಿತೇಕೆ ನಮ್ಮ ಪ್ರೇಮ ಪತಾಕೆ..
ಅಗಲುತ ಈ ದಣಿದೊಣಗಿದ ದೇಹವ..

ನೋಟವದು ಮೀಟಿಹುದು ಹೃದಯದ ತಳವನು
ಕ್ಷಣದೊಳು ದಾಟಿಹುದು ಜಗದೆಲ್ಲ ಮಾಟವನು
ಭುವಿಯಲೆಲ್ಲ ಸೊಸಿಹುದು ಸಹಿಸಲಾಗದ ಧಗೆಯ
ಸುಡುವ ಸುಳಿಗಾಳಿಯೊಳು ಸವಿಯದಂತಹ ಸೌಂದರ್ಯ..

ಉರಿ ಬೆಂಕಿಯದು ಅಗಲಿಸಿತೇಕೆ ನಮ್ಮನು...
ಕರಗಿಸುತ ನಮ್ಮ ಪ್ರೇಮ ಕಳಶವ..

ನಿನ ತನುವ ತಂಪಿನೊಳು ನಾ ಕಂಡೆ ಕಂಪುನು
ಮುನಿದಿರುವ ಮೌನದಲಿ ಮೊರೆಯಿಡುವ ಮಾತನು
ಜೇನಕಾಣದ ಪಾತರಗಿತ್ತಿಯು ಪೇಚಾಡುತಿದೆ
ಕೋರೈಸುವ ಕೇಂದುಟಿಯ ಕರುಣೆಯನು ಕಾಣದೆ..

ನಾವು ನಿಂತ ನೆಲವದು ದೊರವಯಿತೇಕೆ..
ಒಬ್ಬರೊಬ್ಬರ ಒಡೆದ ಒಡಲನು ಸರಿಸುತ...

ನಡುವದು ಕುಣಿದಿಹುದು ಕಾಮನಬಿಲ್ಲನು ನೆನಸುತ
ನುಲಿತದಲಿ ಪದವಿಲ್ಲದ ಸಪ್ತಸ್ವರವನು ಸಾರುತ
ಮುಂಗುರುಳದು ಜೋಡಿಸಿಹುದು ನಡುವಿನೊಳು ಕೈಯನು
ನಡೆದಂತಲೆ ನಲಿಯುತಿಹುದು ಮರೆಸುತಲಿ ಒಲವನು..

ಬಂದವಳು ನೀನೆ, ಬೆರೆಸುತಲಿ ಭವ್ಯ ಭಾವನೆಯ
ನಿಂದವಳು ನೀನೆ, ನೊಂದ ಮನಕೆ ಜೀವತುಂಬಿ

-ಯುವಪ್ರೇಮಿ

Saturday, November 11, 2006

ಪುಟ್ಟ ಮನಸದು ಮಾಸದ ಪುಟವು...!!



ನಿಮ್ಮ ಹುಡುಗ ಬಲು ತುಂಟ..
ಹುಡುಗರಲೆಲ್ಲ ಭಾರಿ ಭಂಟ.
ಮೊಗದಿ ಮಿಡಿವ ನಗೆಯು ಚಿನ್ನ..
ನಡೆವ ಭಂಗಿ ಅದುವೆ ಚೆನ್ನ..
ಹಟದ ಭಂಗಿ ಎಸ್ಟು ಸುಂದರ..!!

ಅಂಗಿ ತೊಡದ ನೋಟ ನೋಡಿ..
ನಾ ಕೆಮ್ಮಿ ಕೆಮ್ಮಿ ನಗುತಲಿಹೆನು...
ಮೊಗದಿ ಸಿಡಿವ ಕ್ಷಣದ ಮೌನ..
ತರುವೆ ತೊರುವ ತುಮುಲ ನೋಟ..
ನಾ ತಿರುಗಿ ತಿರುಗಿ ಕಾಣ್ವೆನು..!!

ಈಗ ಹೆಜ್ಜೆ ಇಟ್ಟಳು ಈ ಕೊಸು..
ನೊಟದಿ ಸರಿಸಿತು ಮನದ ಮುನಿಸು..
ಹಾಲ್ಗೆನ್ನೆಯೊಳು ಅರೆನಕ್ಕರು ಚನ್ನ...
ಬೆರಳನು ಬಿಡದೆ ಬಿಗಿದಿಹ ಬಾಯಿ..
ಒಮ್ಮೆಲೆ ನೆನಪಾಗುವುದು ಬ್ಯಲದಕಾಯಿ...

ಬೆಳ್ಳಿಯ ಗೆಜ್ಜೆಗೊ ನಾಚಿಕೆಯಾಯ್ತು..
ಈ ತುಂಟ ಗಿಳಿಯ ಒಮ್ಮೆಲೆ ನೋಡಿ...!!
ಬಾನಕ್ಕಿಗು ತಡೆಯದ ಭಾದೆಯಾಯ್ತು...
ಈ ಭಿಂಕದ ಬಳ್ಳಿಯ ಬಿರುನಗೆ ಸವೆದು..

ನಿಮ್ಮ ಹುಡುಗನು ಭಾರೀ ತಿಂಟ..!!
ತುಂಟಿಯ ಮೊಗದ ನಗೆ ಎಣಿಸುವುದುಂಟ..??
-ಯುವಪ್ರೇಮಿ

Thursday, November 09, 2006

ಕನವರಿಕೆಯೊಳು ಕಂಡೆ ಕಳವಳವ..!!


ತೆರೆಯ ಮೇಲೆ ಮೊರೆಯ ಕಂಡೆ..
ಮರ್ದನಿಯೊಳು ಮಿಡಿವ ಒಲುಮೆ ಕಂಡೆ..
ಅಗಲಿಕೆಯೊಳೊಮ್ಮೆ ಮಿಲನೆ ಕಂಡೆ..
ಗರ್ಶಣೆಯಲ್ಲು ಕೊಡ ಪ್ರೀತಿ ಕಂಡೆ..!!

ಕಂಡೆ ನಾ ಅದ್ಬುತವ...
ನನ್ನ ಅಂತರಂಗದ ಕಂಗಳಿಂದ...!!

ಬವಣೆಯಲೊಮ್ಮೆ ಭಾವನೆಯ ಕಂಡೆ...!!
ಕುರೊಪದಲೊಮ್ಮೆ ನಿರ್ಮಲತೆಯ ಕಂಡೆ..
ತೇಲುವ ತೆರೆಯೊಳು ತೊಳಲಾಟವ ಕಂಡೆ..
ಬೇಯುವ ಭೇಗೆಯಲೊಮ್ಮೆ ಬಂದನವ ಕಂಡೆ...!!

ನೊಕಾಟದ ನಾಕದೊಳು ಕಂಡೆನಾ...
ಒಡಲುಗಳ ಒಡನಾಟದ ನಡಿಗೆಯನು...!!

ಸಹಜತೆಯೊಲೊಮ್ಮೆ ಆಡಂಬರವ ಕಂಡೆ...
ಅನೇಕತೆಯಲೊಮ್ಮೆ ಏಕತೆಯನು ಕಂಡೆ..
ನೀಲತೆಯೊಳೊಮ್ಮೆ ಕರಾಳೆತೆಯನು ಕಂಡೆ...!!
ಅಲೆದಾಟದಲೊಮ್ಮೆ ಸೆಳೆದಾಟವ ಕಂಡೆ..

ಸವೆದೆ ನಾ ಸ್ಪರ್ಶವ...
ಸಿಡಿಯುವ ಸೌಮ್ಯ ಸಂಗರ್ಶದೊಳು..!!

ಅಪರೊಪದ ಹಸಿ ರೊಪವ ಕಂಡೆ ..
ಮನದಿ ಮೊಳೆಯುವ ಪಿಸುಮಾತಿನಲ್ಲಿ...
ಕಂಭನಿಯಲೊಮ್ಮೆ ಕಿರಿಗನಸ ಕಂಡೆ...
ಅಃ ನಲ್ಲು ಕಂಡೆ ನಾ ಅರಳುವ ಅಂದವ...!!

ಕಂಡೆ ನಾ ಸಂಪ್ರೀತಿಯ...
ಸುಳಿದಾಡುವ ಸುಡು ಸಿಡಿಲೊಳು....!!

-ಯುವಪ್ರೇಮಿ

Sunday, November 05, 2006

ನಿನ್ನ ನೋಟಕೆ ಜಗ ನಡುಗಿದೆ.....!!


ಹಾಲ್ನಡಿಗೆಯಲಿ ಹೊಲವೆಲ್ಲವ ಹುತ್ತಿದಂತಿದೆ...
ಹಸುಗೊಸಿನ ಬಾಯ್ ಚಪ್ಪರಿಸುವ ಬಯಕೆಯಂತಿದೆ...
ಇಳೆಯ ಸವಿಯ ಸವೆಯೆ ತುಟಿಯಿಂದ ಮುತ್ತಿತಂತಿದೆ..
ನಿನ್ನ ನಗೆಯಲ್ಲಿ ಭೊತಾಯಿಯ ಸನಿಹ ಕರೆದಂತಿದೆ..!!

ನಿನ ಮಿಡಿತಕೆ ಮನ ಕರಗಿದೆ...
ನಿನ ಗುಂಗಲಿ ಜಗವೆ ಮರೆಯಾಗಿದೆ...

ನಿನ ಪ್ರೀತಿಯ ಹರಡಲು ಕೋಗಿಲೆಯ ಕೊಗಿದಂತಿದೆ..
ನಿನ ನೋಟವ ಕುರುಡನು ಕಂಡು ಬೆರಗಾಗುವಂತಿದೆ...
ನಿನ ಮೆರುಗಿನ ಸನಿಹವೆ ಅಂಬೃತವ ಸವಿದಂತಿದೆ...
ನಿನ ಗುಡುಗದು ನನ ಪ್ರೇಯಸಿಯ ಕಣ್ಹಹೊರಳಂತಿದೆ..
ನೀ ಕರಗಿ ಹುದಿರಿದೊಡೆ, ಆನಂದಭಾಶ್ಪ ದಂತಿದೆ...!!

ನಿನ ಮಡಿಲಲಿ ನಾ ಕಂದನು...
ನಿನ ಚುಂಬನಕೆ ಹಾತೊರೆಯುತಿರುವೆನು....!!

ಮನದ ಮಾತಿಗಾಯ್ತು ಮಂಜೆ ಮುಸುಕು...
ನಿಜ ಜೀವನಕೆ ನೀನೀಡಿದೆ ಹೊಸ ಅರ್ಥ..
ಕೀಳಿರಿಮೆಯ ಜಗದಿ ನೀ ತಂದಿಹೆ ಸಮಾನತೆ..
ನೈದಿಲೆಯ ನೋಟದಿ ನನ ಬಂದದಿ ಬಿಡಿಸಿಹೆ...!!


ನಿನ ಕುಣಿತಕೆ ನಾ ಹಿಗ್ಗಿದೆ..
ನಿನ ಸಿಂಗಾರದಿಂ ಎನ್ನ ಸೊರೆಮಾಡಿಹೆ...!!

ನೋಟವಿದ್ದರು ನಾ ಎನನು ಕಾಣದಂತಿತ್ತು..
ಮಾತುಗಳು ಮನದಿಂ ಜಿಗಿಯೆ ಮರೆತಂತಿತ್ತು..
ಹೆಜ್ಜೆಯದು ನೆಲದಿ ನಿಲ್ಲಲು ನಡುಗುತಿತ್ತು...
ಸೌಂದರ್ಯದ ಸಿಂಚನದಿ ನೀ ಇಂದು ನೀಡಿಹೆ..
ನನ್ನೀ ಬಾಳಿಗೆ ಬೆಳ್ಳಿಯೆ ನಾಚುವಂತ ಹೊಕಳೆ...!!

-ಯುವಪ್ರೇಮಿ

Tuesday, October 31, 2006

ಇಂದಿನ ಕನ್ನಡಾಂಬೆ..!!


ಮೆರೆತ ಮೊರೆತದ್ ಆಡಂಬರವ ಬೇಡಲಿಲ್ಲ..
ಮನದಿ ಪ್ರೀತಿಯ ಕಣವು ಕಾಣದಂತಿಹುದಲ್ಲ...
ಜೀವದಾರೆಯ ಜೀವದೊಳು ಜಂಜಾಟ ಹುಟ್ಟಿಹುದು.
ಇದುವೆ ಏನು ಮಮತೆಯು, ತಾಯ ಮೇಲಣ ಭೀತಿಯು..!!

ಮಡಿಲನಂಚಿಹಳು ಮೊರೆದು ಕರೆವಂತಹ ಮಕ್ಕಳಿಗೆ..
ಮತದ ಮಾತಿಗೆ ಮನಕೊಡದೆ ಮುದ್ದಿಸಿಹಳು ಮಂದಹಾಸದಿ..
ಹಾಲೆರೆದು ಹಾರೈಸಿಹಳು ಬೆಳಗಲು ನಾಳೆಯ ದೀವಿಗೆಯ..
ದಿಟ್ಟತನದಿಂ ತಾಯ ತೆಕ್ಕೆಯ ಸುಡಲೊರಟಿಹಿರೆ ನೀವಿಂದು..!!

ಅಪರೊಪದ ಅಪರಾವತಾರಳು ನಮ್ಮ ಕನ್ನಡಾಂಬೆ..
ಹೊಗಳುವುದಕೆ ಒಂದು ದಿನದ ಆಚರಣೆ ಹೆಚ್ಚಾಯ್ತೆ..!!
ಹುಲಿಗಳನು ಹಡೆದಂತೆ ಕೊಂಡಾಡಿದಳು ನಿಮ್ಮನೀಕೆ...
ಹಸಿ ಮೊಳೆಗೆ ಹರಸಿದ ಅಂಗೈಯ್ಯ ಕಡಿಬೇಕೆ...!!

ನೊರ್ಕಾಲ ಬಾಳಲೆಂದು ಕನ್ನಡದ ಹಾಲೆರೆದಳು ನಮಮ್ಮ...
ಹಗೆಯ ಹೊಗೆಯ ನಂದಿಸೆ ನೀಡಿದಳು ಕನ್ನಡದ ಉಸಿರ...
ಕಾವೇರಿ, ತುಂಗ , ನೇತ್ರಾವತಿಯ ಸಾರಂಗದೋಳ್ ಆಡಬಿಟ್ಟಳು..
ತನು ಮನದ ಮೆರುಗಿಗೆ ಪ್ರಕ್ರುತಿಯ ಸೌಧದೊಳು ನೆಲೆಕೊಟ್ಟಳು..

ಇಂತಾಯ್ತು ಏಕೆ...!! ಮಂಕಿಡಿದು ಕೊಳೆತಂತೆ ನಿಮ್ಮೀಮನವು...!!
ತಾಯ ಶೋಶಣೆಯೊಳು ಸಂತಸವ ಸವಿದಂತೆ ಮೆರೆದಿಹುದು..
ಮೆರೆತದೊಳು ನಿಮ್ಮ ಮಾನವ ಮುರಿದ ಮನೆಯಂತಾಗಿಸಿ...!!
ಹುಚ್ಚಿಡಿದ ಹೆಬ್ಬಾವಂತೆ ಹೆಡೆಬಿಡದೆ ಸಾವಿಗೆ ಹೊಡೆದಾಡಿಹಿರಿ..

ಮರುಗದಿರು ನನ್ನ ತಾಯೆ, ನಿಮ್ಮ ಹಸಿ ಕಂದನಾನಿಹೆನು...!!
ಹುಸಿಇಲ್ಲದು ನನ್ನಲಿ, ಅದುವೆ ಆಗಸದ ತಳದಸ್ಟು ದೊರ..
ಮನದ ಕಣ ಕಣದೊಳಿಹುದು ಪ್ರೀತಿ, ಉಕ್ಕುತ ಮಹಾಪೊರ..
ಅಂಬೃತದ ಬಿಂದೊಳು ಬಸಿದ ಆಯುದವಿಹುದು, ಅದೆ ಕನ್ನಡ..!!
ನಿಮ್ಮ ಕನಸನೆ ನನ್ನ ಮನಸೆಂದು ಕಟ್ಟುವೆನು ನಾಡ, ಅದೆ ಕರ್ನಾಟಕ..!!

ಕರ್ನಾಟಕ ಸುಪುತ್ರ..
-ಯುವಪ್ರೇಮಿ....

Monday, October 30, 2006

ಬೃಂದಾವನವ ಸೇರಿಸೆನ್ನನು... ಬೆಳ್ಳಕ್ಕಿಯೆ...!!

ಚಿತ್ತಾರದೋಳ್ ಏನ್ನ ಚಿತ್ತ ಚಂಚಲಿಸಿಹೆ
ಬೆಳ್ಳನೆಯ ಮೈಯೊಳೆನ್ನ ಬಳಿ ಕರೆದಂತಿಹೆ
ನಿನ್ನ ಕಂಗಳಿಂದೆನ್ನ ಮನವ ಮಾಣಿಸಿಹೆ..
ಕಾರ್ಮೋಡದ ಕೆಂಪೊಳು ತಂಪ ಕಾರಿಸಿಹೆ..

ಏಂದು ಬಳಿಗೆ ಬರುವೆ ನೀ..
ಏನ್ನ ನಿನ್ನೊಡೆ ಕರೆದೊಯ್ಯುಲು...!!

ನಿನ್ನ ತನುವಿನೊಳು ಬಾನಂಗಳವ ಬಳಸಿಹೆ
ಮನಕಂಟಿರುವ ಮಂಕನು ನಿನ ಕುಂಚದಿ ತೊರೆಸಿಹೆ..
ನಿನ ರೆಕ್ಕೆಯನೊಮ್ಮೆ ನಾಏರಬಯಸುವೆ..
ನಾ ಕಾಣಬೇಕಿರುವ ನಂದನವನವ ಸೇರಿಸೆಯ..!!

ಏಂದು ಕರೆದೊಯ್ಯುವೇ ನೀ..
ಏನಗೆ ಬೃಂದಾವನವ ತೋರಿಸಲು..!!

ನಿನ ಮ್ರುದು ಮೈನಗೆ ಏನ್ನೀ ಮೈ ಮರೆಸುವಂತಿದೆ..
ನಿನ ಕುಣಿತಕೆ, ಹಸಿ ನೆಗೆತಕೆ ಜಗವೆ ನಾಚುವಂತಿದೆ..
ತೆರೆಯ ಮೇಲೆ ನೀ ತಂದಿಹೆ ಬಿಡಿಸಲಾಗದ ಬೆಸುಗೆ...
ಏನ್ನೀ ಮನದ ಅಂತರಾಳವ, ಸ್ವಾತಂತ್ರದ ಕಿಸೆಗೆ...

ಏಂದು ಬೃಂದಾವನವ ತೋರಿಸವೆ ನೀ..
ನನ್ನೀ ಬದುಕ ಬವಣೆ ತೊರೆಸಲು...!!

ಸೋರ್ಯನ ಹಿಂದಟ್ಟಿದಂತಿಹುದು ನಿನ್ನ ಓಟ..
ನಿನ್ನ ಕಳೆದು ಕೋಂಡಂತಾಡಿಹುದು ಓಡನಾಟ..
ಓಮ್ಮೆ ನಿನ್ನ ಮೈಲೇರಿಸಿಕೊ ಏನ್ನನು...
ನಾಳೆ ಕಾಣೋ ಸೋರ್ಯೋದಯದ ದರ್ಶನಕೆ...

ಏಂದು ಬವಣೆ ತೊರೆಸುವೆ ನೀ..
ಬೃಂದಾವನದ ಬೃಂದದ ನೋಟದಿ...!!

ಹೃದಯದಾಳದ ಪ್ರೇಮ ಬೆಳೆದು...
ಕ್ಷಣ ಕ್ಷಣವ ತಪಗೈದು ಕಳದು...
ನಿನ್ನ ದಾರಿಯ ಕಾದು ಕುಸಿದು...
ನಾಳೆ ಬರುವೆ ಏನ್ನೊ ಬ್ರಮೆಯಲಿ..
ಓರಳಿಹುದು ಹೃದಯವು, ನಿನ್ನ ದಾರಿ ಕಾಯುತ....

ಏಂದು ಬೃಂದವ ನೊಡಿಸುವೆ ನೀ..
ಬೃಂದದ ಜೇನೊಳು ಮಿಂದು ಏನ್ನ ಮರೆಯಲು...

-ಯುವಪ್ರೇಮಿ

Wednesday, October 18, 2006

ನನ್ನೆನಾ ಕಂಡೆನು, ನಿನ್ನೊಳಗೆ...!!


ಮತ್ತೊಂದು ಸುಮಧುರ ಅನುಭವ... !!

ಮರಳಿ ಬಂದಿಹೆನು ನಾ..
ನಿನ ಮನಕಲಕುವ ನೋಟ ನೋಡಲು..
ತಣಿಸಿ ಕುಣಿಸಾಡಲು ಈ ನನ್ನ ಮನವ..

ಹಲ್ನಗೆಯ ಹಸಿನೋಟಕೆ ಹುಚ್ಚನಾದೆನು
ಮನ ನಾಟುವ ಮೈಮಾಟಕೆ ಸೋತುಹೋದೆನು
ನಿನ ನೋಡುವ ಯತ್ನದಲಿ ಕಳಿದುಕೊಡೆನು..
ನನ್ನೆ ನಾ.. ನಿನೊಳಗೆ...!!

ಹಸಿದಿರುವ ಈ ಮನಕೆ ನೀನಾದೆ ಶಕ್ತಿ..
ಮಾಸಿರುವ ನೆನಪುಗಳ ನೀ ಮೆಲುಕುತ ಕಲಕಿ
ಮರುಗಿರುವ ಈ ಹೃದಯವ ನೀ ಮುಟ್ಟದೆ ತಟ್ಟಿ
ನೀಡಿರುವೆ ರಂಗೊಂದ... ನಿನ ನಗೆಯಂತೆ..!!

ನನ ಸುತ್ತಲು ನೀ ಸುತ್ತಿದಂತಿದೆ..
ನನ ಕಾಣಲು ನೀ ಕುಳಿತಂತಿದೆ..
ತನು ಸವೆಯಲು ನೀ ಬಂದಂತಿದೆ..
ಹೊಳೆಯುವ ಅಲೆಯಳು ಕರೆದಂತಿದೆ..
ಇದ ಕೇಳಿ ಬಂದಿಹೆನು ನಾ...
ನಿನ್ನ ತನುವಿನ ಬಂದನಕೆ...!!

ನಿನ ಹೊಗಳಲು ಪದ ಕಾಣುತಿಲ್ಲ
ನಿನ ಸವಿಯಲು ಮನ ಸಾಲುತಿಲ್ಲ
ನಿನ ಗರಿ ನಗೆಗೆ ಸರಿಸಾಟಿಯಾರೂ ಇಲ್ಲ..
ನಾನಿಂದು ಕಂಡೆನು.. ನನ್ನೆನಾ ನಿನೊಳಗೆ..

ನನ ಜೀವನ ಸಾದನೆಗೆ ನೀನಾದೆ ಜೊತೆಗಾರ್ತಿ..
ಅಣು ಅಣುವಲು ನಿನ ಪ್ರೇಮವೆ ತುಂಬಿಹುದು ಸ್ಪೂರ್ತಿ..
ಹೋಗಿಬರುವೆ ನಾ.. ನಿನ ಪ್ರೀತಿಯ ಜಗಕಂಚಲು..
ಹಗೆತುಂಬಿಹ ಈ ಹುಸಿ ಜಗಕೆ ಕಿಚ್ಚಿಕ್ಕಲು...

-ಯುವಪ್ರೇಮಿ...

Wednesday, October 11, 2006

ಕನಸಲೊಮ್ಮೆ ನಿನ್ನ ಕರುಣಿಸು...!!


ಕನಸಿಲ್ಲದೆ ಕುರುಡಾಗಿದೆ ನನ್ ಅಂತರಂಗದ ಮನಸು...
ಎತ್ತ ನೋಡಿದರತ್ತ ನಿನ್ನ ಛಾಯೆ ಬೆಟ್ಟದಂತೆ ಕಾವಲಿಹುದು..
ನನ್ನ ಕನಸಲೊಮ್ಮೆ ಕನವರಿಸಿ ಇ ಜೀವ ಉಳಿಸೆಯ...!!

ನಿನ್ನ ಮನವ ನಲಿಸಿ ಮುದ್ದಿಸುವಂತ...
ನಿನ್ನ ತನುವ ಸುತ್ತ ಸುತ್ತುವಂತ...
ನನ್ನೆ ನಾನು ಮರೆಯುವಂತ ಕನಸ ತರಿಸೆಯ....!!!

ಒಮ್ಮೆ ನನ್ನ ಕೈ ಹಿಡಿದು ನೋಡು...
ನನ್ನ ಜೀವನ ನೀ ಇಲ್ಲದಿರೆ ಬರಡು...
ನಿನ್ನ ಮನಸಿನಲ್ಲಿ ಸ್ತಳವಿಲ್ಲದಿದ್ದರೇನಾಯ್ತು..
ನಿನ್ನ ಕನಸಲ್ ಒಂದು ಸ್ತಾನ ನೀಡೆಯ...!!

ಆ ಕಣ್ಣ ಹೊಳಪಿನಲ್ಲಿ ಹೊಳೆಯುತಿಹುದೆನ್ನ ಬದುಕು...
ನಿನ್ನ ಮುಂಗುರಳ ಹಿಡಿದು ಜೋತಾಡುತಿಹುದೆನ್ನ ಮನವು...
ನಿನ್ನ ಅಳುವ ಬಿಂದಿನಲ್ಲಿ ಜಾರುತಿಹುದು ನನ್ನ ಹ್ರುದಯ...
ನಿನ್ನ ಮನವ ಸ್ಪರ್ಶಿಸಲ್ ಒಮ್ಮೆ ದಾರಿ ತೋರೆಯ...!! ನನ್ನ ಪ್ರಿಯ..!!

-ಯುವಪ್ರೇಮಿ

Monday, October 09, 2006

ಸರಿತಪ್ಪಿನ ಅರಿವಿಲ್ಲವೊ ಸ್ವಚ್ಚ ಪ್ರೀತಿಗೆ ಮನುಜ.... !!

ನಿಷ್ಕಲ್ಮಷ ಪ್ರೇತಿಗಿಲ್ಲ, ಸರಿ ತಪ್ಪಿನ ಅರಿವು...
ತಿಳಿದಿರುವುದೊಂದೆ ಅದಕೆ, ನೀಡುವುದು ತನ್ನಯ ಒಲವು...
ನಿನ ಪ್ರೀತಿಯಪರ ಚಿಂತಿಸುತಲಿ ವಂಚಿತನಾಗದಿರು ನೀ...
ಹ್ರುದಯೋನ್ಮುಕ ಪ್ರೀತಿಗಿಲ್ಲ ಎಂದೊ... ಸಾವು ನೋವು...

ಪರಿತಪಿಸುತ ನಿನ ಪ್ರೀತಿಯ ನೀನೆಂದು ಸಂಶಿಸದಿರು..
ಕಾಲದ ಅಲೆಯಳು ನೀ ಜಾರಿ ದಡ ಸೇರಲು ಮುಂದಿರು
ಗುಡು ಗುಡುಗುವ ಸುಡು ಬೆಂಕಿಯು ಸುಡದಂತಿಡು ಪ್ರೀತಿಯ..
ಬರಸಿಡಿಲು ಬಡಿದರೇನ್ , ಕಳೆಯದಂತಿಡು ನಿನ ಪ್ರೀತಿ ಕಾಂತಿಯ..

ಪರಿತಪಿಸದಿರು ನೀ ಗೆಳೆಯನೆ, ಪ್ರೇತಿಸಿದವಳ್ ಸಿಗದಿದ್ದರೇನ್
ನುಲಿದಾಡುವ ನೀಲವೇಣಿಯ ಕೈಬಿಡು.. ಸ್ವಚಂದದ ಹಸಿ ಪ್ರೀತಿಯ ಕಾಪಾಡು...

ನಿನ್ನ ಗೆಳೆಯ...
-ಯುವಪ್ರೇಮಿ

ಮನೆಮನವ ನೀ ಎಂದು ತುಂಬುವೆ... ??

ಮನದ ಒಳಗೆ ನಿಂದೆ ನೀನು.... ಮನಕೆ ಮತ್ತು ಬರಿಸಲು...
ಪ್ರೀತಿ ಪ್ರೇಮದ ಬೆಳಕ ಹರಿಸಿ ಮನವ ಸಂತೈಸಲು....
ಮಿಡಿಯುತಿಹುದು ಎನ್ನ ಮನವು... ಮಿಡಿವ ರಾಗ ಕೇಳುನೀ...
ಮನವು ತುಂಬಿಹೋಯಿತಿನ್ನು... ಮನೆಯವರ ಭಾದೆ ತಾಳೆನಿನ್ನು...
ಎಂದು ಮನಗೆಬರುವೆ ನೀ... ನಮ್ಮಮ್ಮನ ನೋಡಲು...

ಜಪವು ತಪವು ನಡೆಯುತಿಹುದು ನಿನ್ನ ಹೆಸರಿನಲ್ಲಿ...
ನಿನ್ನ ನಯನದ ಉಂಗುರ ತುಂಬಿಹುದು ನನ್ನ ಉಸಿರುನಲ್ಲಿ...
ಕ್ಷಣ ಕ್ಷಣವು ಯುಗಗಳಾಗಿ ಮಿಸಿಕುತಿಹುದು ಕೊರಳನು...
ತಾಳಲಾರೆ ನಾನು ಇನ್ನು, ನಿನ್ನ ದಾರಿ ಕಾಯುತಿಹೆನು...
ಎಂದು ಮನಗೆಬರುವೆ ನೀ... ನಮ್ಮಮ್ಮನ ನೋಡಲು...
ಸೇರಿ ಬಾಳ್ವೆ ಮಾಡಲು... ಜೀವನ ರಸದೊಟವ ಸವಿಯಲು...

-ಯುವಪ್ರೇಮಿ

ಏನಾಗಲೇಳೀಗ ನಿನ್ನ ಸೆಳೆಯಲು... !!


ಬಚ್ಚಿಕೊಳ್ಳುವಾಸೆ ನಿನ್ನ ಕಣ್ಣುಗಳಲಿ...
ನಿನ್ನ ಕೊಲ್ಲೊ ನೋಟ ನಾ ತಾಳಲಾರೆ..
ನೆನೆದು ಹೋಗುವಾಸೆ ನಿನ್ನ ಕೆಂದುಟಿಯಲ್ಲಿ...
ನಿನ್ನ ಹಾಲ್ನಗೆಯ ಮಾಟವ ನಾ ಸಹಿಸಲಾರೆ..
ಕರಗಿ ಕಣ್ಣೀರಾಗುವಾಸೆ ನಾ ಹರಿಯಲು...
ನಿನ್ನ ಕೆನ್ನೆಯ ಸಂತೈಸಲು... ಮೌನದಿ ಮುತ್ತಿಕ್ಕಲು...

ಏನಾಗಲೇಳೀಗ ನಿನ್ನ ಸೆಳೆಯಲು...
ನಿನ ಮನಸ ನಾ ಮಣಿಸಿ ಒಂದಾಗಲು..

ಆಶಾಡದ ಗಾಳಿಯಾಗುವಾಸೆ.. ನಾ ಬರಿಸಲು...
ಆ ಮುಂಗುರಳ ಕುಂಚದಿ ನಿನ್ನ ಕೆಣಕಾಡಲು...
ಜೇನ ಸುಗಂಧವಾಗುವಾಸೆ... ನಿನ್ನ ತಣಿಸಲು...
ನಿನ್ನೊಳು ನುಸುಳಿ ನಿನ್ನ ಮೈಮರೆಸಲು...

ಏನಾಗಲೇಳೀಗ ನಿನ್ನ ಸೆಳೆಯಲು...
ನಿನ ಮನಸ ನಾ ಮಣಿಸಿ ಒಂದಾಗಲು...

ಹಾಡಾಗುವಾಸೆ ಆಗಸದಿ ನಿನಕನಸ ನಾಕಸಿಯಲು...
ಹೊವಾಗುವಾಸೆ ಮುಡಿಸೇರಲು, ನಿನಕೇಷವ ಮುಂಡಾಡಿ ನನ್ನ ಮರೆಯಲು..
ಜರಿಯಾಗುವಾಸೆ ನಾ ತಣಿಸಲು, ನಿನ ಕಿವಿಯ ನಾ ತಣಿಸಿ ಕುಣಿದಾಡಲು
ಕಡಲ ದಡವಾಗುವಾಸೆ.. ನಿನ ಹೆಜ್ಜೆಯ ಹಸಿ ಗುರುತು ನಾ ಸವಿಯಲು..

ಏನಾಗಲೇಳೀಗ ನಿನ್ನ ಸೆಳೆಯಲು...
ನಿನ ಮನಸ ನಾ ಮಣಿಸಿ ಒಂದಾಗಲು..

-ಯುವಪ್ರೇಮಿ

ಕಡಳಾಲದ ಒಡಲು...!!


ಇದೊಂದು ಸತ್ಯ ಸುಂದರ ಅನುಭವ..... ನಾಕಂಡ ನಯನ ಮನೋಹರ ಮಂದಿರ...

ಕಡಲ ತೀರಕೆ ಬಂದಿಹೆನುನಾ
ನಿನ್ನೊಡಲ ಹುಡುಕಲೆಂದು...
ದಣಿದು ನಡೆದು ತವೆದು ಬಂದೆ
ನಲಿವಿನೊಡಲ ಸೊಬಗ ಕಾಣಲ್..
ಬೆಚ್ಚಿ ನಿಂದೆ.. ಕಣ್ಮುಚ್ಚಿ ಸವಿದೆ...
ಪ್ರಕೃತಿಯ ರಸದೊಟವ...

ಕಡಲ ತೀರಕೆ ಬಂದಿಹೆನುನಾ
ನಿನ್ನೊಡಲ ಹುಡುಕಲೆಂದು...

ಇಳಿಯ ಹೊರಟೆ ಕಡಲೊಲು ಈಗ
ನಿನ್ನ ಒಡಲ ಸ್ಪರ್ಶಿಸಲು..
ಪಚ್ಚೆ ಮುತ್ತು ರತ್ನ ವಿದೆಯೊ..
ಅಪ್ರತಮ ಅಂಬೃತದ ಸುದೆಯೋ
ನೋಡಬಯಸುವೆನು ಒಮ್ಮೆಲೆ
ನಿನ್ನ ಒಡಲ... ಕಡಲ ಒಳಗೆ....

ಕಡಲ ತೀರಕೆ ಬಂದಿಹೆನುನಾ
ನಿನ್ನೊಡಲ ಹುಡುಕಲೆಂದು...

ಎಷ್ಟು ಸವಿಯೆ ತ್ರುಪ್ತಿಇಲ್ಲ
ತವೆದ ದಣಿವು ಕಾಣದಾಯ್ತಲ್ಲ
ಯಾವ ಮಾಯೆ ಮೆರೆಯುತಿಹುದೊ ಏನೋ
ನಿನ್ನೊಡಲ ಸ್ಪರ್ಶದಿ... ನಿನ್ನೊಲುಮೆಯ ಕುಂಚದಿ...

ಕಡಲ ತೀರಕೆ ಬಂದಿಹೆನುನಾ
ನಿನ್ನೊಡಲ ನೋಡಲೆಂದು...

ದಡದ ಅಲೆಯಾಯ್ತು ಕಿವಿಗೆ ಜೇಂಕಾರ...
ನಿನ್ನೊಡಲ ಸೌಂದರ್ಯವೆ ನಯನಕೆ ಓಂಕಾರ
ನಿನ್ನ ಸ್ಪರ್ಶದಿ ಬುವಿಯಲೆಲ್ಲ ಆಹಾಕಾರ
ಎನ್ನೆದೆಯ ದುಗುಡಕೆಲ್ಲ ಕ್ಷಣಮಾತ್ರದಿ ಸಂಸ್ಕಾರ...

ಕಡಲ ತೀರಕೆ ಬಂದಿಹೆನುನಾ
ನಿನ್ನೊಡಲ ಸವಿಯಲೆಂದು...

-ಯುವಪ್ರೇಮಿ.....

Monday, July 03, 2006

ಚಲುವಿನೊಲವು...!!


ಏರಿ ಬಾ... ಹೃದಯಾಳದ ಸಿಂಹಾಸನವ ಒಮ್ಮೆ..
ನಿನ್ನ ಸ್ಪರ್ಶದಿಂ ಎನ್ನೆ ಬಾಳ ಬೆಳಗು ಇಂದೆ...
ನಶಿಸಿ ಹೋಗುತಿರುವ ಸವಿಯ ನೆನಪ ತಡೆಹಿಡಿ...
ಸುಮನಸ ಗೋಡೆಯ ಮೇಲ ಚಿತ್ತರವ ಇಂದೆ ಕಡಿ...

ಮನಕೆ ಮತ್ತು ಮರೆಸಲಾಗದಂತ ಅನುಭವ...
ಹೃದಯದ ನೆತ್ತರು ಉಕ್ಕೇರುವ ಸಡಗರ...
ಆತ್ಮದ ಆಯಸವ ತಣಿಸುವಂತ ರೋಚನೆ...
ಇವೆಲ್ಲ ಆಗುವದು ನಾ ನಿನ್ನ ಮನವ ಮುಟ್ಟಿದೊಡನೆ...

ಬಿರುಗಾಳಿಯೆ ಬೆಪ್ಪಾಯಿತು ಕಂಡು ನಿನ್ನ ಪ್ರೇಮವ...
ಚಲುವ ವಲವು ಎನ್ನಮೇಲಿರಲು ಮತ್ತಾವುದರ ಅಭಾವ...
ನಿನ್ನ ಚಲುವೆ ಸುಧೆಯ ಮುಂದೆ ಬೇಲೊರು ಕಮ್ಮಿನೆ...
ಕ್ಷಣದಿ ಕಾಣದಿರೆ ನಿನ್ನ... ತುಮುಲದಿ ತೊಳಲಾಡುವುದು ಯವ್ವನ..

-ಯುವಪ್ರೇಮಿ...